ನಿಸರ್ಗ ಕಾಲೇಜಿಗೆ ಶೇ.98 ಫಲಿತಾಂಶ

Published on

ಕೊಳ್ಳೇಗಾಲ: ಪಟ್ಟಣದ ನಿಸರ್ಗ ಸ್ವತಂತ್ರ ಪದವಿಪೂರ್ವ ಕಾಲೇಜು 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ ಸಾಧಿಸಿದೆ.

ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 494 ವಿದ್ಯಾರ್ಥಿಗಳ ಪೈಕಿ 480 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 182 ಅತ್ಯುನ್ನತ ಶ್ರೇಣಿ, 244 ಪ್ರಥಮ ದರ್ಜೆ, 49 ದ್ವಿತೀಯ ದರ್ಜೆ ಹಾಗೂ 5 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ.98 ಫಲಿತಾಂಶ ಬಂದಿದೆ. 113 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 111 ಪ್ರಥಮ ದರ್ಜೆ, 12 ವಿದಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಸಿ.ಅನು 600ಕ್ಕೆ 587, ಎನ್.ಅನುಷಾ 584, ಎಸ್.ಶಿವರಂಜಿನಿ 583 , ವಿ.ಧನುಶ್ 583, ಕೆ.ಎಲ್.ಕುಮಾರಸ್ವಾಮಿ 581 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ.98ರಷ್ಟು ಫಲಿತಾಂಶ ಬಂದಿದೆ. 57 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 99 ಪ್ರಥಮ ದರ್ಜೆ, 27 ದ್ವಿತೀಯ ದರ್ಜೆ, ಇಬ್ಬರು ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಬಿ.ಭಾವನಾ 586, ಎಸ್.ಭವಾನಿ 586, ಬಿ.ಮಹದೇವ ಪ್ರಸಾದ್ 579, ಎಂ.ಮನು 576, ವಿ.ಸಂತೋಷ್ 574 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ.

ಕಲಾ ವಿಭಾಗದಲ್ಲಿ ಶೇ.96 ಫಲಿತಾಂಶ ಬಂದಿದೆ. 12 ಅತ್ಯುನ್ನತ ಶ್ರೇಣಿ, 34 ಪ್ರಥಮ ದರ್ಜೆ, 10 ದ್ವಿತೀಯ ದರ್ಜೆ, 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಲ್ಲಿ ಎಲ್.ಐಶ್ವರ್ಯ 588, ಎಂ.ಅಂಬಿಕಾ 574 , ಎಸ್.ಜಬಿನ್ ಜಪಮಾಲೈ 564 , ಎಸ್.ಪವಿತ್ರಾ ಆಂಟೋನಿ ಅಮ್ಮಳ್ 564, ಸುಶ್ಮಿತಾ 561, ಎಸ್.ಪ್ರಶಾಂತ್ 560 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ.

100ಕ್ಕೆ 100 ಅಂಕ: ಕನ್ನಡದಲ್ಲಿ 14 ವಿದ್ಯಾರ್ಥಿಗಳು, ಭೂಗೋಳಶಾಸ್ತ್ರ 11, ಲೆಕ್ಕಶಾಸ್ತ್ರ 3, ಇತಿಹಾಸ 1, ಗಣಿತಶಾಸ್ತ್ರ 6, ಜೀವಶಾಸ್ತ್ರದಲ್ಲಿ ನಾಲ್ವರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net