

ಹನೂರು: ಪಟ್ಟಣದ ಶ್ರೀ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.95.23 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಪಡೆದಿದ್ದು, 6 ಅತ್ಯುತ್ತಮ, 9 ಪ್ರಥಮ ಹಾಗೂ ಮೂವರು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಎಂ.ನಂದಿನಿ 549, ಎಸ್.ರಮ್ಯಾ 548, ಶಾಫಿಯಾ 540, ಎಲ್.ದರ್ಶನ್ 535, ಜಿ.ರಮ್ಯಾ 521, ಓ.ಪವಿತ್ರಾ 513 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.91.66 ಫಲಿತಾಂಶ ಲಭಿಸಿದ್ದು, ಇಬ್ಬರು ಅತ್ಯುತ್ತಮ ಶ್ರೇಣಿ, 19 ಪ್ರಥಮ ಹಾಗೂ ಒಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿ.ಸಹನಾ 519, ಎಂ.ಪ್ರಜ್ವಲ್‌ಕುಮಾರ್ 513 ಹಾಗೂ ಸಚಿನ್ ರಾಥೋಡ್ 485 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಸಂಸ್ಥೆ ಅಧ್ಯಕ್ಷೆ ಉಮಾ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಸಂಚಾಲಕ ರಾಜೇಂದ್ರನ್ ಹಾಗೂ ಪ್ರಾಂಶುಪಾಲ ಜಿ.ಮಧುಸೂದನ್ ಅಭಿನಂದಿಸಿದ್ದಾರೆ.