ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸ್ಮೃತಿ ದಿನಾಚರಣೆ

022
Published on

ಚಾಮರಾಜನಗರ:ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾತೇಶ್ವರೀ ಜಗದಂಬಾ ಸರಸ್ವತೀಜಿಯವರ 59 ನೇ ಸ್ಮೃತಿ ದಿನಾಚರಣೆ ಆಚರಿಸಲಾಯಿತು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಮಾತನಾಡಿ, 1936 ರಲ್ಲಿ ಹೈದರಾಬಾದ್, ಕರಾಚಿಯಲ್ಲಿ ದಾದಾ ಲೇಖರಾಜ್ ನೇತೃತ್ವದಲ್ಲಿ ಸ್ಥಾಪನೆಯಾದ ಮಹಿಳೆಯರ ಸಣ್ಣ ಆಧ್ಯಾತ್ಮಿಕ ಸಂಘಟನೆಯು ಇಂದು ಜಗತ್ತಿನಾದ್ಯಂತ ಹೆಮ್ಮರವಾಗಿ ಬೆಳೆಯಲು ಮಾತೇಶ್ವರಿ ಜಗದಂಬಾ ಸರಸ್ವತೀಜೀ ತ್ಯಾಗ, ಸೇವೆಯೇ ಮೂಲ ಕಾರಣ ಎಂದು ತಿಳಿಸಿದರು.

ಮಾತೇಶ್ವರಿಯವರು ಪ್ರತಿ ಗಳಿಗೆಯನ್ನು ಅಂತಿಮಗಳಿಗೆ ಎಂದು ಸಾಧನೆ ಮಾಡಿದರು. ಅವರು ಯಾರಲ್ಲಿಯೂ ಅವಗುಣವನ್ನು ನೋಡದೆ, ಪ್ರತಿಯೊಬ್ಬರಲ್ಲಿ ಗುಣವನ್ನು ನೋಡುವ ಗುಣಗ್ರಾಹಿಯಾಗಿದ್ದರು. ಬೆಂಗಳೂರಿನ ಶಿವಾಜಿನಗರದಲ್ಲಿ 1958 ರಲ್ಲಿ ಸಣ್ಣ ಕೊಠಡಿಯಲ್ಲಿ ಸ್ಥಾಪನೆ ಮಾಡಿದ ಈಶ್ವರೀಯ ವಿಶ್ವವಿದ್ಯಾಲಯವು ಇಂದು ದಕ್ಷಿಣ ಭಾರತದಾದ್ಯಂತ ವ್ಯಾಪಿಸಿ, ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಓಂಶಾಂತಿ ಬಿ.ಕೆ.ಆರಾಧ್ಯ, ಸರಳಾ, ನಾರಾಯಣ, ಭಾಗ್ಯ, ಸತೀಶ್, ಶ್ರೀನಿವಾಸ್, ಗೋವಿಂದರಾಜು, ಗೀತಾ, ಪ್ರಮಿಳಾ, ಸುಕನ್ಯಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net