

ಚಾಮರಾಜನಗರ : ಸುಪ್ರಸಿದ್ಧ ಹಿನ್ನೆಲೆ ಗಾಯಕ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಹೆಸರಿನಲ್ಲಿ ಸ್ಥಾಪನೆಯಾಗಿರುವ ವೇದಿಕೆಯೊಂದು, ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾದ ಕೆಲಸಗಳನ್ನು ಮಾಡುತ್ತಿದೆ.
ಚಾ.ನಗರ ತಾಲೂಕಿನ ವಿವಿಧ ಗ್ರಾಮಗಳ ಸಮಾನ ಮನಸ್ಕರು ಒಗ್ಗೂಡಿ ನಿರ್ಮಿಸಿಕೊಂಡಿರುವ ಡಾ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಸಂಗೀತ ಕಾರ್ಯಕ್ರಮವಲ್ಲದೇ, ಸಾಹಿತ್ಯಾತ್ಮಕವಾಗಿ, ಸಾಮಾಜಿಕವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಹೆಚ್ಚು ಪ್ರಚಲಿತದಲ್ಲಿದೆ.
ಪ್ರಸ್ತುತ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಕೆಇಬಿ ಶಿವಶಂಕರ್ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಎಚ್.ಎಂ.ಶಿವಣ್ಣ, ಉಪಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ.ರಾಜಣ್ಣ ಚಂದಕವಾಡಿ, ಜಂಟಿ ಕಾರ್ಯದರ್ಶಿಯಾಗಿ ಜೋಸೆಫ್, ಖಜಾಂಚಿ ಸಿಡಿ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಜಯರಾಜ್, ಹಾಗೂ ಮಹೇಶ್ ಕುಮಾರ್, ಬಂಗಾರು, ವಸಂತ ಬಂಗಾರು, ವೆಂಡರ್ ಶಂಕರ್, ಶಂಕರಪ್ಪ, ಮಂಜಣ್ಣ, ಮಧು, ದೊರೆರಾಜ್ ಅವರು ಸದಸ್ಯರಾಗಿದ್ದಾರೆ. ಗಾನಗಂಧರ್ವ ಡಾ.ಬಾಲಸುಬ್ರಹ್ಮಣ್ಯಂ ಅವರ ಕಲಾಸೇವೆಯನ್ನೇ ಆದರ್ಶವಾಗಿಸಿಕೊಂಡಿರುವ ಸಂಸ್ಥೆಯು ಈವರೆಗೂ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಜಿಲ್ಲಾ ದಸರಾ ಮಹೋತ್ಸವ ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಿದ್ದಾರೆ. ಕಲಾ ಸೇವೆಯ ಜತೆಗೆ ನೂರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸಮಾಜಸೇವೆ ಮಾಡಿದವರನ್ನು ಸನ್ಮಾನಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಕಲಾ ವೇದಿಕೆ ಕಲಾ ಕೈಂಕರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.
ಗಾನಗಂಧರ್ವ ಎಸ್ಪಿಬಿ ಆದರ್ಶ:
ದೇಶದ ಹತ್ತಾರು ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡಿ ಪ್ರಸಿದ್ಧಿ ಪಡೆದಿರುವ ಗಾನಗಂಧರ್ವ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರು ಇವರ ಸಂಸ್ಥೆಗೆ ಆದರ್ಶವಾಗಿದ್ದಾರೆ. ಸಂಸ್ಥೆಯಲ್ಲಿರುವ ಹೆಚ್ಚಿನ ಜನರು ಎಸ್ಪಿಬಿ ಅವರ ಅಪ್ಪಟ ಅಭಿಮಾನಿಗಳಾಗಿದ್ದಾರೆ. ಅನೇಕ ಬಾರಿ ಎಸ್ಪಿಬಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅವರ ಹಾಡುಗಳನ್ನು ಕೇಳುತ್ತಾ ಬೆಳೆದು ಅವರ ಹೆಸರಿನಲ್ಲೇ ಬದುಕು ಕಟ್ಟಿಕೊಳ್ಳಲು ತೀರ್ಮಾನಿಸಿ, ತಮ್ಮ ಬದುಕಿನ ಜತೆಗೆ ಇನ್ನಿತರರಿಗೂ ನೆರವಾಗುತ್ತಿರುವುದು ಮೆಚ್ಚುವಂತಹ ನಡೆಯಾಗಿದೆ. ವರ್ಷಪೂರ್ತಿ ಅವರ ಹೆಸರಿನಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಎಸ್ಪಿಬಿ ಹೆಸರನ್ನು ಅಭಿಮಾನಪೂರ್ವಕವಾಗಿ ಅಜರಾಮರವಾಗಿಸುತ್ತಿದ್ದಾರೆ.
ಹಲವು ಜನಪರ ಕಾರ್ಯಕ್ರಮ:
ಡಾ.ಎಸ್.ಬಿ.ಬಾಲಸುಬ್ರಮ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ. ರಾಷ್ಟ್ರೀಯ ನಾಯಕರ ಜಯಂತಿಯ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಉದ್ಯಾನವನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮ, ಹಿರಿಯ ನಾಗರಿಕರು, ಅಂಧ ಮಕ್ಕಳು, ಅಂಗವಿಕಲರು, ರೈತರು ಹಾಗೂ ಇನ್ನಿತರೆ ನಿರ್ಗತಿಕರಿಗೆ ನಿರಂತರವಾಗಿ ಸಹಾಯಹಸ್ತ ಚಾಚುತ್ತಾ ಬರುತ್ತಿದ್ದಾರೆ. ಹಲವಾರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಿಕೊಂಡು ಬಂದಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಹೆಸರಿನಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರದ ಬಗೆಗಿನ ಕಾಳಜಿ ತೋರಿಸಿದ್ದಾರೆ. ಈ ಮೂಲಕ ಕಲಾ ಕ್ಷೇತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ವೇದಿಕೆ ಛಾಪು ಮೂಡಿಸುತ್ತಿದೆ.
ಸಂಗೀತ ಕಾರ್ಯಕ್ರಮಗಳಿಗೆ ಸಂಪರ್ಕಿಸಿ:
ಕಳೆದ ಮೂರು ವರ್ಷಗಳಿಂದಲೂ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಸುಗಮ ಸಂಗೀತ, ಜಾನಪದ ಗೀತೆ, ಭಕ್ತಿ ಗೀತೆ, ಭಾವಗೀತೆ ಹಾಗೂ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವವರು ಕಲಾ ವೇದಿಕೆಯನ್ನು ಸಂಪರ್ಕಿಸಬಹುದಾಗಿದೆ. ವೇದಿಕೆಯ ಅಧ್ಯಕ್ಷ ಎಚ್.ಎಂ.ಶಿವಣ್ಣ 8694911173, ರಾಜಣ್ಣ 8660843398 ಹಾಗೂ ಶಿವಶಂಕರ್ 7975893303 ಅವರನ್ನು ಸಂಪರ್ಕಿಸಬಹುದಾಗಿದೆ.
ನಗರದ ಹೊಸ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಉದ್ಯಾನವನಕ್ಕೆ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಹೆಸರು ಇಡುವಂತೆ ಸುಮಾರು 4 ವರ್ಷಗಳಿಂದ ವೇದಿಕೆ ವತಿಯಿಂದ ಮನವಿ ಸಲ್ಲಿಸುತ್ತಿದ್ದೇವೆ. ಅದೊಂದು ಈಡೇರಿಕೆಗೆ ನಮ್ಮ ಸಂಸ್ಥೆಯ ಗುರಿಯಾಗಿದೆ.ಎಚ್.ಎಂ.ಶಿವಣ್ಣ, ಅಧ್ಯಕ್ಷ, ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಕಲಾ ವೇದಿಕೆ, ಚಾಮರಾಜನಗರ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಸಾರ್ವಜನಿಕರ ಬೆಂಬಲದಿಂದ ಎಲ್ಲವೂ ನಿರಾತಂಕವಾಗಿ ನಡೆಯುತ್ತಿದೆ.ಶಿವಶಂಕರ್, ಗೌರವಾಧ್ಯಕ್ಷ, ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಕಲಾ ವೇದಿಕೆ, ಚಾಮರಾಜನಗರ