ಬಿರುಗಾಳಿಗೆ ನೆಲಕ್ಕುರುಳಿದ ಮರಗಳು

020
Published on

ಚಾಮರಾಜನಗರ : ನಗರದಲ್ಲಿ ಗುರುವಾರ ಬೀಸಿದ ಜೋರು ಗಾಳಿಗೆ ಹಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿವೆ. ನಗರದಲ್ಲಿ ಮಧ್ಯಾಹ್ನದ ವೇಳೆ ಬೀಸಿದ ಬಿರುಗಾಳಿಯಿಂದಾಗಿ, ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಉದ್ಯಾನದಲ್ಲಿ ಮರವೊಂದು ಮುರಿದು ಬಿದ್ದಿದ್ದು, ಉದ್ಯಾನವನದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ತುಂಡಾಗಿವೆ.

ನಗರದ 21 ನೇವಾರ್ಡ್‌ನಲ್ಲಿ ಸುರೇಶ್ ಅವರ ಮನೆಯ ಮೇಲೆ ತೆಂಗಿನಮರ ಮುರಿದು ಬಿದ್ದಿದ್ದು, ಶೀಟ್ ಮೇಲೆ ಮರ ಬಿದ್ದಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವು ಸಮಯ ಬಿರುಗಾಳಿಯಿಂದಾಗಿ ರಸ್ತೆಗಳು ಧೂಳುಮಯವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net