ಅಮಿತ್ ಷಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗೆ ಖಂಡನೆ

PARIMALA NAGAPPA (1)
Published on

ಹನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗೃಹಮಂತ್ರಿ ಅಮಿತ್ ಷಾ ಅವರ ಬಗ್ಗೆ ನೀಡಿರುವ ನಿಂದನೀಯ ಹೇಳಿಕೆಗೆ ಹನೂರು ಬಿಜೆಪಿ ಪಾಳಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮಾ.28 ರಂದು ಹನೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಮಿತ್ ಷಾ ಅವರು ಗೂಂಡಾ, ರೌಡಿ, ಗುಜರಾತ್ ಗಲಭೆಗೆ ಕಾರಣರಾದವರು ಕೇಂದ್ರ ಗೃಹ ಸಚಿವರಾಗಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ದಿಸೆಯಲ್ಲಿ ಹನೂರು ಬಿಜೆಪಿ ವಲಯದಲ್ಲಿ ಯತೀಂದ್ರ ಹೇಳಿಕೆ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಹನೂರು ಹಾಗೂ ರಾಮಾಪುರ ಮಂಡಲದ ವತಿಯಿಂದ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಲು ನಿರ್ಧರಿಸಲಾಗಿದೆ. ಈ ರೀತಿಯ ಹೇಳಿಕೆ ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಮುಖ್ಯಮಂತ್ರಿ ಪುತ್ರನ ಈ ನಿಂದನೀಯ ಹೇಳಿಕೆ ಹನೂರು ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಖಂಡನೆ ವ್ಯಕ್ತವಾಗಿದೆ ಎಂದು ಹನೂರು ಬಿಜೆಪಿ ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ ತಿಳಿಸಿದರು.

ಯಾರಾದರೂ ಸರಿ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಇದರಲ್ಲಿ ಪ್ರಬುದ್ಧತೆ ತೋರಿಸಬೇಕು. ದೇಶವನ್ನು ಕಾಪಾಡುತ್ತಿರುವ ಅಮಿತ್ ಷಾ ಅವರ ಬಗ್ಗೆ ಡಾ.ಯತೀಂದ್ರ ಸಿದ್ದರಾಮಯ್ಯ ಈ ರೀತಿಯ ನಿಂದನೀಯ ಹೇಳಿಕೆ ನೀಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.-ಪರಿಮಳಾ ನಾಗಪ್ಪ ಮಾಜಿ ಶಾಸಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net