ವಿಜೃಂಭಣೆಯಿಂದ ಜರುಗಿದ ಪಟ್ಟದಲದಮ್ಮ ಬಂಡಿಉತ್ಸವ

29rajesh6
Published on

ಚಾಮರಾಜನಗರ: ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಶುಕ್ರವಾರ ಪಟ್ಟಲದಮ್ಮ ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಉಡಿಗಾಲ ಹಾಗೂ ಇನ್ನಿತರೆ ಸುತ್ತಮುತ್ತಲಿನ ಊರುಗಳ ನೂರಾರು ಭಕ್ತರು ಬಂಡಿ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಎರಡು ದಿನಗಳ ಕಾಲ ನಡೆಯುವ ಪಟ್ಟದಮಲ್ಲಮ್ಮ ಜಾತ್ರೋತ್ಸವಕ್ಕೆ ಶುಕ್ರವಾರ ಚಾಲನೆ ದೊರಕಿದೆ. ಕೊಂಡೋತ್ಸವ ಹಾಗೂ ರಥೋತ್ಸವ ಶನಿವಾರ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ನಡೆದವು. ವಿವಿಧ ಅಭಿಷೇಕಗಳು, ಪೂಜೆ ಮಹಾಮಂಗಳಾರತಿ ನಡೆಯಿತು.

ಬಳಿಕ ಶ್ರೀಪಟ್ಟಲದಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಂಡಿಮನೆಯಿಂದ ಗ್ರಾಮದ ಹೊರ ಭಾಗದಲ್ಲಿರುವ ಜಮೀನಿಗೆ ಬಂಡಿಗಳನ್ನು ಕೊಂಡೊಯ್ದು ಅಲಂಕೃತ ಎತ್ತಿನ ಬಂಡಿಗಳನ್ನು ಓಡಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಜನರು ಕೂಡ ಎತ್ತುಗಳನ್ನು ಹಿಡಿದುಕೊಂಡು ಬಂದು ಬಂಡಿ ಕಟ್ಟಿ ಓಡಿಸಿ ಉತ್ಸಾಹ ಮೆರೆದರು. ಮಧ್ಯರಾತ್ರಿ 12 ಗಂಟೆಗೆ ಗ್ರಾಮದಲ್ಲಿ ಕೀಲು ಉತ್ಸವ ಮತ್ತು ಮದ್ದಿನ ಪ್ರದರ್ಶನ ನಡೆಯಿತು. ಶನಿವಾರ ಬೆಳಗಿನ ಜಾವ 5 ಗಂಟೆಗೆ ಕೊಂಡೋತ್ಸವ ಹಾಗೂ ಶ್ರೀಪಟ್ಟಲದಮ್ಮದೇವಿ ವಾಹನ ಉತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ ಅಲಂಕೃತ ತೇರಿನಲ್ಲಿ ದೇವಿಯ ಉತ್ಸವ ಮೂರ್ತಿ ಕೂರಿಸಿ ರಥೋತ್ಸವ ನಡೆಯಲಿದೆ ಎಂದು ಶ್ರೀ ಪಟ್ಟಲದಮ್ಮ ಜಾತ್ರಾ ಸಮಿತಿ ಅಧ್ಯಕ್ಷ ಯು.ಎಂ.ಪ್ರಭುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net