ರಾಮ್‌ರಾವ್ ಅವರ ಕೊಡುಗೆ ಅಪಾರ

25rajesh6
Published on

ಚಾಮರಾಜನಗರ: ಇಂಡಿಯನ್ ನ್ಯಾಷನಲ್ ಆರ್ಮಿಗೆ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಾಮ್‌ರಾವ್ ಅವರ ಕೊಡುಗೆ ಅಪಾರವಾಗಿದೆ ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟಪ್ಪನಾಗಪ್ಪಶೆಟ್ಟಿ ತಿಳಿಸಿದರು.

ನಗರದ ಭಾರತಸೇವಾದಳದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಐಎನ್‌ಎ ರಾಮ್‌ರಾವ್ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ನೇತಾಜಿ ಸುಭಾಷ್‌ಚಂದ್ರಬೋಸ್ ಅವರು ಕಟ್ಟಿದರು. ಅದಕ್ಕೆ ರಾಮ್‌ರಾವ್ ಅವರ ಕೊಡುಗೆ ಸಾಕಷ್ಟಿದೆ. ಅದಕ್ಕಾಗಿಯೇ ಐಎನ್‌ಎ ರಾಮ್‌ರಾವ್ ಎಂದೇ ಚಿರಪರಿಚಿತರಾದರು. ಸೇವೆಗಾಗಿ ಬಾಳು ಎಂಬ ಧ್ಯೇಯವಾಕ್ಯದೊಂದಿಗೆ ನಾ.ಸು.ಹರ್ಡಿಕರ್ ಅವರಿಂದ ಸ್ಥಾಪಿತವಾದಂತಹ ಭಾರತ ಸೇವಾದಳದ ಸಂಸ್ಥೆ ಉಳಿವಿಗೆ ಐಎನ್‌ಎ ರಾಮ್‌ರಾವ್ ಅವರೇ ಮೂಲ ಕಾರಣವಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಎಸ್.ನಾಗರಾಜು ಮಾತನಾಡಿ, ರಾಮ್‌ರಾವ್ ಅವರಂತ ದೇಶಭಕ್ತರ ಜನ್ಮದಿನಚರಣೆ ನಡೆಸುತ್ತಿರುವುದು ನಿಜಕ್ಕೂ ಅವಿಸ್ಮರಣೀಯ. ಸೇವೆಗಾಗಿ ಬಾಳು ಎಂಬ ತತ್ವ ಅಳವಡಿಸಿಕೊಂಡಿದ್ದಾರೆ. ಮಕ್ಕಳಲ್ಲೂ ಇಂತಹ ಮನೋಭಾವನೆಯನ್ನು ಬೆಳೆಸುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಜಿಲ್ಲಾ ಕಾರ್ಯದರ್ಶಿ ವಿ.ಮಹದೇವಯ್ಯ, ತಾಲೂಕು ಸಮನ್ವಯ ಶಿಕ್ಷಣಾಧಿಕಾರಿ ರಾಜೇಂದ್ರ, ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ್ ನಾಯಕ್, ತಾಲೂಕು ಉಪಾಧ್ಯಕ್ಷ ಸಿ.ಮಲ್ಲಿಕಾರ್ಜುನ, ಜಿಲ್ಲಾ ಸಂಘಟಕ ಅರುಣ್, ಸಿಆರ್‌ಪಿ ಮಹೇಶ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net