ಆರೋಗ್ಯ ಬೆಳವಣಿಗೆಗೆ ಕ್ರೀಡೆ ಸಹಕಾರಿ

24raju2
Published on

ಚಾಮರಾಜನಗರ: ಮಕ್ಕಳ ಆರೋಗ್ಯವಂತ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ವಕೀಲ ದಲಿತ್‌ರಾಜ್ ಹೇಳಿದರು.

ನಗರದ ಇಮ್ಮಾನುವೇಲ್ ಕ್ರಿಶ್ಚಿಯನ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆವಯಾಗುತ್ತದೆ ಎಂದರು. ಸಿಆರ್‌ಪಿ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಶಿಕ್ಷಣ ನೀತಿ ಮಕ್ಕಳ ಮೂರು ವರ್ಷದಲ್ಲಿ ಶಿಕ್ಷಣದ ಬುನಾದಿಯಾಗಿದೆ. ಈ ಶಿಕ್ಷಣ ಸಂಸ್ಥೆ ಉತ್ತಮ ಬುನಾದಿ ಶಿಕ್ಷ ಣ ನೀಡುತ್ತಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆ ಪಠ್ಯೇತರ ಚಟುವಟಿಕೆ ಸಹಕಾರಿಯಾಗಿದೆ ಎಂದರು.


ಸ್ಕೂಲ್ ಅಧ್ಯಕ್ಷೆ ಜೋಸ್ನಾ ಅಂಥೋಣಿ ಮಾತನಾಡಿ, ಚಾಮರಾಜನಗರದ ಮಕ್ಕಳಿಗೆ ಇಂಟರ್ ನ್ಯಾಷನಲ್ ಶಿಕ್ಷಣ ಕೊಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಇಲ್ಲಿ ಶಾಲೆ ತೆರೆಯಲಾಗಿದೆ. ಇದನ್ನು ಇಂಟರ್ ನ್ಯಾಷನಲ್ ಶಾಲೆಯಾಗಿ ಮಾರ್ಪಾಡು ಮಾಡಲಾಗುವುದು. ಇಲ್ಲಿ ಶಾಲೆ ತೆರೆಯಲು ನಮಗೆ ಜಾಗ ಒದಗಿಸಿಕೊಟ್ಟ ಕನಕಗಿರಿ ಟ್ರಸ್ಟ್ ಪದಾಧಿಕಾರಿಗಳಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುವುದು. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡಿದ್ದು, ಇದಕ್ಕೆ ಸಹಕಾರ ನೀಡಿದ ಶಿಕ್ಷಕರು, ಪಾಲಕರಿಗೆ ಅಭಾರಿಯಾಗಿರುತ್ತೇನೆ. ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮಕ್ಕಳಿಗೆ ಶುಭವಾಗಲಿ ಎಂದು ಆಶಿಸಿದರು.
ಬಿಆರ್‌ಪಿ ಮಹದೇವಯ್ಯ, ಶಾಲೆಯ ಸಂಯೋಜಕ ಬ್ರದರ್‌ಸ್ವಾಮಿ, ಸುರೇಶ್ ಹಾಗೂ ಶಿಕ್ಷಕವೃಂದ, ಪಾಲಕರು, ಮಕ್ಕಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net