ಡಿ.15, 16 ರಂದು ಆರಾಧನಾ ಮಹೋತ್ಸವ

Published on


ಚಾಮರಾಜನಗರ: ತಾಲೂಕಿನ ಮರಿಯಾಲ ಗ್ರಾಮದ ಶ್ರೀಮುರುಘರಾಜೇಂದ್ರ ಮಹಾಸಂಸ್ಥಾನ ಮಠದಲ್ಲಿ ಡಿ.15 ಮತ್ತು 16ರಂದು ಸದ್ಗುರು ಶ್ರೀಮುರುಘ ರಾಜೇಂದ್ರ ಸ್ವಾಮೀಜಿ ಅವರ 106ನೇ ವರ್ಷದ ಸಂಸ್ಮರಣಾ ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.


ಡಿ. 15ರಂದು ರಾತ್ರಿ 10 ಗಂಟೆಗೆ ಜಂಗಮ ಪುಷ್ಪಾಂದೋಲಿಕಾ ಮಹೋತ್ಸವ, ವಚನ ಸಂಪುಟ ಹಾಗೂ ಶ್ರೀಮಠದ ಗುರು ಪರಂಪರೆಯ ಭಾವಚಿತ್ರ ಮೆರವಣಿಗೆಯು ಮಂಗಳವಾದ್ಯ, ನಂದಿಧ್ವಜ, ಶಿವಭಜನೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ.

ಡಿ. 16ರಂದು ಮುಂಜಾನೆ 5 ಗಂಟೆಗೆ ಕರ್ತೃ ಗದ್ದುಗೆಗಳಿಗೆ ಪೂಜೆ, ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳಗ್ಗೆ 7 ಗಂಟೆಗೆ ಷಟಸ್ಥಲಧ್ವಜಾರೋಹಣ, ಶರಣ ಚಿಂತನಾ ಕಾರ್ಯಕ್ರಮ, ಬೆಳಗ್ಗೆ 8 ಗಂಟೆಗೆ ಪೂಜ್ಯರ ಪಾದಪೂಜೆ ನೆರವೇರಲಿದೆ. ರಾತ್ರಿ 10 ಗಂಟೆಗೆ ಶ್ರೀಮುರುಘ ರಾಜೇಂದ್ರ ಮಹಾಸ್ವಾಮಿ ಕಲಾ ಸಂಘದಿಂದ ‘ಪ್ರಭುಲಿಂಗಲೀಲೆ’ ನಾಟಕ ಏರ್ಪಡಿಸಲಾಗಿದೆ ಎಂದು ಮಠದ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net