ಮರಿಯಾಲ ಮಠಕ್ಕೆ ಅನುದಾನ

17raju10
Published on

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ ತಾಲೂಕಿನ ಮರಿಯಾಲದ ಶ್ರೀಮುರುಘರಾಜೇಂದ್ರ ಮಠಕ್ಕೆ ಕೆಆರ್‌ಐಡಿಎಲ್‌ನಿಂದ 25 ಲಕ್ಷ ರೂ. ಅನುದಾನ ನೀಡಲಾಗಿದೆ.

ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಮಠಕ್ಕೆ ಬರುವ ಭಕ್ತರಿಗೆ ಯಾತ್ರೆ ನಿವಾಸ ನಿರ್ಮಾಣಕ್ಕೆ ಶುಕ್ರವಾರ 25 ಲಕ್ಷ ರೂ. ನೀಡಿದ್ದಾರೆ. ಸದ್ಗುರು ಶ್ರೀಮುರುಘರಾಜೇಂದ್ರ ಸ್ವಾಮೀಜಿಯ 106ನೇ ವರ್ಷದ ಸಂಸ್ಮರಣ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಉತ್ಸವದಲ್ಲಿ ಭಾಗವಹಿಸಿದ್ದ ರುದ್ರೇಶ್ ಅವರಿಗೆ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದ್ದರು. ಬಳಿಕ ಸ್ವಾಮೀಜಿಗೆ ಕೆಆರ್‌ಐಡಿಎಲ್‌ನ ಸಿಎಸ್‌ಆರ್ ಅನುದಾನದಲ್ಲಿ 25 ಲಕ್ಷ ರೂ. ಚೆಕ್ ನೀಡಿ ಆಶೀರ್ವಾದ ಪಡೆದರು. ಮುಖಂಡರಾದ ಮೂಡ್ಲುಪುರ ನಂದೀಶ್, ನಾಗೇಂದ್ರ, ಕೆಸ್ತೂರು ಬಸವಣ್ಣ, ಹೆಗ್ಗೋಠಾರ ಮಾದಪ್ಪ ಇತರರು ಇದ್ದರು.

ಈ ಸಂದರ್ಭ ವಿಜಯವಾಣಿಯೊಂದಿಗೆ ಮರಿಯಾಲಶ್ರೀಗಳು ಮಾತನಾಡಿ, ಮಠಕ್ಕೆ ಬರುವ ಭಕ್ತರಿಗೆ ಯಾತ್ರಿ ನಿವಾಸ ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಹಾಗಾಗಿ ಅನುದಾನ ಸಿಕ್ಕಿದೆ. ಯಾತ್ರಿ ನಿವಾಸ ನಿರ್ಮಾಣಕ್ಕೆ ಭಕ್ತರೂ ಕೈಜೋಡಿಸಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net