ಬೈಕ್​ ಮೇಲೆ ಮಲಗಿರುವ ರೀತಿ ಮೃತ ದೇಹ ಪತ್ತೆ: ಮ.ಬೆಟ್ಟದ ರಸ್ತೆಯಲ್ಲಿ ಶಾಕಿಂಗ್​ ಘಟನೆ

Employye Death
Published on

ಚಾಮರಾಜನಗರ: ತಾಳುಬೆಟ್ಟದ ಬಳಿ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ನೌಕರರೊಬ್ಬರು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮಹದೇವಪ್ರಸಾದ್ (28) ಎಂಬವರೇ ಮೃತ ವ್ಯಕ್ತಿ. ಈತ ಮ.ಬೆಟ್ಟದಲ್ಲಿ ಪಂಪ್ ಹೌಸ್​ನಲ್ಲಿ ಅಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಪತ್ನಿಯ ಊರಾದ ನಂಜನಗೂಡಿನ ತೆಳ್ಳೂರಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಅನುಮಾಸ್ಪದವಾಗಿ ಮೃತಪಟ್ಟಿದ್ದಾರೆ. ಮ.ಬೆಟ್ಟದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net