ಮಣ್ಣಿಗೆ ಪೂರಕ ಕೃಷಿ ಮಾಡಿ

Note: Soil day
Note: Soil day
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಪುತ್ತನಪುರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ(ಕೆವಿಕೆ) ವತಿಯಿಂದ ವಿಶ್ವ ಮಣ್ಣು ದಿನ ಆಚರಿಸಲಾಯಿತು.

ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಾ.ಜಿ.ಎಸ್.ಯೋಗೇಶ್ ಮಾತನಾಡಿ, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರು ರಾಸಾಯನಿಕಗಳನ್ನು ವ್ಯತಿರಿಕ್ತವಾಗಿ ಮತ್ತು ವಿವೇಚನೆಯಿಲ್ಲದೆ ಬಳಸಬಾರದು ಎಂದರು.
ವ್ಯವಸಾಯವನ್ನು ಮಣ್ಣಿಗೆ ಪೂರಕವಾದ ರೀತಿ ನಿರ್ವಹಿಸುವುದರಿಂದ ಪರಿಸರದಲ್ಲಿ ಜೀವ ವೈವಿಧ್ಯತೆ ಉತ್ತಮಗೊಂಡು ಬೆಳೆಗೆ ಉತ್ತಮವಾದ ವಾತಾವರಣ ದೊರಕುತ್ತದೆ ಎಂದರು.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಬಿ.ರಾಜಶೇಖರಪ್ಪ ಮಾತನಾಡಿ, ರೈತರು ವೈಜ್ಞಾನಿಕ ಶಿಫಾರಸುಗಳನ್ನು ಅಳವಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಪ್ರತಿಕೂಲ ಪರಿಣಾಮಗಳನ್ನು ಕನಿಷ್ಠಗೊಳಿಸಬಹುದೆಂದು ತಿಳಿಸಿದರು. ಇದೇ ವೇಳೆ ರೈತರಿಗೆ ಮಣ್ಣು ಪರೀಕ್ಷೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.

ಹಂಗಳ ರೈತ ಉತ್ಪಾದಕರ ಸಂಸ್ಥೆ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮಹದೇವಸ್ವಾಮಿ, ಗ್ರಾಪಂ ಸದಸ್ಯ ಪಿ.ಎಸ್.ಸುರೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಶಿವಣ್ಣ, ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ನಂದಿನಿ ಕೆವಿಕೆ ವಿಜ್ಞಾನಿ ಕು.ಸುಪ್ರಿಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net