

ಚಾಮರಾಜನಗರ: ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಆರ್.ಉಮೇಶ್ ಹಾಗೂ ಉಪಾಧ್ಯಕ್ಷರಾಗಿ ಮಹದೇವಸ್ವಾಮಿ ಅವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಮಂಗಳವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕರಾಗಿದ್ದ ಆರ್.ಉಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಶಿವರಾಂ ಅವಿರೋಧ ಆಯ್ಕೆ ೋಷಿಸಿದರು. ಅವಿರೋಧ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಘದ ಉಪಾಧ್ಯಕ್ಷ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ನಾಗರಾಜು, ಎಸ್.ಮಹದೇವ್, ರೇವಣ್ಣ, ಮಹೇಶ್‌ಕುಮಾರ್, ಶಂಕರ್, ನಿರ್ದೇಶಕರಾದ ರಾಜಶೇಖರ್, ಬಿ.ಮಹದೇವಸ್ವಾಮಿ, ಚಂದ್ರಶೇಖರ್, ಜಯರಾಮು, ಕೆಂಗೇಗೌಡ, ಶಾರದಮ್ಮ, ಎಂ.ಸೋಮಣ್ಣ, ಎಂ.ಅಶೋಕ್, ಪುಟ್ಟಸ್ವಾಮಿ, ವೀರಭದ್ರ, ಎನ್.ಶ್ರೀಕಂಠಸ್ವಾಮಿ, ಆನಂದ, ಪಿ.ಮಾದಪ್ಪ ಮತ್ತು ಇತರರು ಹಾಜರಿದ್ದರು.