ಪ್ರಯಾಣಿಕರಿಗೆ ಶಿಸ್ತಿನ ಪಾಠ ಕಲಿಸಿದ ಕರೊನಾ: ಅಂತರ ಕಾಯ್ದುಕೊಂಡ ಬಸ್ ಹತ್ತಿದ ಜನರು

CHN
Published on

ಚಾಮರಾಜನಗರ: ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಕಂಡ ಕಡೆಗಳಲ್ಲೆಲ್ಲಾ ಉಗುಳುವುದು, ಗಿಜಿಗಿಡುವ ಸದ್ದು, ಎಲ್ಲೆಂದರಲ್ಲಿ ಕಸ ಎಸೆಯುವುದು, ಬಸ್ ಬರುತ್ತಿದ್ದಂತೆ ಹತ್ತಲು ಮುಗಿಬೀಳುವ ಪ್ರಯಾಣಿಕರಿಗೆ ಕರೊನಾ ಶಿಸ್ತಿನ ಪಾಠ ಕಲಿಸಿದೆ.

ಲಾಕ್​ಡೌನ್ ಸಡಿಲಿಕೆಗೊಂಡು ಆರಂಭಗೊಂಡಿರುವ ಬಸ್ ಸಂಚಾರ ಸೌಲಭ್ಯ‌ವನ್ನು ಪ್ರಯಾಣಿಕರು‌ ನಿಯಮ‌‌ ಪಾಲನೆಯ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಬುಧವಾರ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹಿಂದಿನ‌‌ ದಿನಗಳಂತೆ ಕಂಡು ಬರಲಿಲ್ಲ. ಬಸ್ ಹತ್ತಿ, ಸೀಟು ಹಿಡಿಯುವುದನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡು ಓಡುತ್ತಿದ್ದವರಿಂದ ಹಿಡಿದು ತಾಳ್ಮೆಯಿಂದ ಬಸ್ ಏರುತ್ತಿದ್ದವರೆಲ್ಲರೂ ಸರತಿ‌ ಸಾಲಿನಲ್ಲಿ ನಿಂತು‌ ಬಸ್ ಹತ್ತಿದರು.‌

ನಿಲ್ದಾಣದ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನ್ ಗೆ ಒಳಗಾಗಿ, ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಬಸ್ ಹತ್ತಲು ಅವಕಾಶ ನೀಡಲಾಗಿದೆ.‌‌ ಕೈಗಳನ್ನು‌ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಜರ್ ನೀಡಲಾಯಿತು.

ಗುಟ್ಕಾ,‌ ತಂಬಾಕು ಜಗಿದು ನಿಲ್ದಾಣದ ಮೂಲೆ‌ ಮೂಲೆಗಳಲ್ಲೂ ಉಗಿಯುವವರ ಮೇಲೆ ಸೆಕ್ಟರ್ ಅಧಿಕಾರಿಗಳ ತಂಡ ಕಣ್ಣಿಟ್ಟಿದ್ದು, ದಂಡ ವಿಧಿಸುವುದಾಗಿ‌ ಫ್ಲೈಯಿಂಗ್ ಸ್ವ್ಕಾಡ್ ಅಧಿಕಾರಿಗಳು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net