

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುವುದಾಗಿ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಹೇಳಿದರು.
ತಾಲೂಕಿನ ಕಿಲಗೆರೆ, ಮಾದಲವಾಡಿ, ಯರಗನಹಳ್ಳಿ, ಯಣಗುಂಬ, ವಡ್ಡರಹಳ್ಳಿ, ಹೊಸಹಳ್ಳಿ ಅರಕಲವಾಡಿ, ಲಿಂಗನಪುರ, ಯಾನಗಳ್ಳಿ, ಚನ್ನಪ್ಪನಪುರಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಶಕ್ತಿಕೇಂದ್ರದ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿರುವ ಕಾರಣದಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಉತ್ತಮವಾಗಿ ಕೆಲಸ ಮಾಡಿ ಕಮಲ ಅರಳಿಸಲು ಶ್ರಮಿಸಲಾಗುವುದು ಎಂದರು. ಇದೇ ವೇಳೆ ಕಿಲಗೆರೆ ಗ್ರಾಮದಲ್ಲಿ 8 ಜನರಿಗೆ, ಯರಗನಹಳ್ಳಿ ಗ್ರಾಮದಲ್ಲಿ 7 ಜನರಿಗೆ ಧನ ಸಹಾಯ ಮಾಡಿದರು. ಮೂಡಲಪುರ ನಂದೀಶ್, ಕಿಲಗೆರೆ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬೆಳ್ಳಪ್ಪ, ತಾಪಂ ಮಾಜಿ ಸದಸ್ಯ ಲೋಕೇಶ್ , ವಡ್ಡರಹಳ್ಳಿ ವೀರಪ್ಪಸ್ವಾಮಿ, ಯಣಗುಂಬ ಶಿವು, ಮಹದೇವಸ್ವಾಮಿ, ಯರಗನಹಳ್ಳಿ ಬಸವಣ್ಣ, ಶಿವಕುಮಾರ್, ಶೇಖರಪ್ಪ, ಶಿವಬಸಪ್ಪ, ನಾಗರಾಜಪ್ಪ, ವೃಷಬೇಂದ್ರಪ್ಪ, ಕಿಲಗೆರೆ ಶ್ರೀಕಂಠಪ್ಪ, ಲೋಕೇಶ್, ರಾಜಶೇಖರ, ರಮೇಶ್, ಬಂಗಾರನಾಯಕ, ಸ್ವಾಮಿ ಇತರರು ಹಾಜರಿದ್ದರು.