ಉತ್ತಮ ನಡವಳಿಕೆಯೇ ಮಾನವೀಯ ಮೌಲ್ಯ

23raju1
Published on

ಚಾಮರಾಜನಗರ: ಉತ್ತಮ ನಡವಳಿಕೆಯೇ ಮಾನವೀಯ ಮೌಲ್ಯವಾಗಿದೆ ಎಂದು ತ್ವರಿತ ವಿಶೇಷ ನ್ಯಾಯಾಲಯದ ಅಪರ ಜಿಲ್ಲಾ ನ್ಯಾಯಾಧೀಶೆ ಎ.ಸಿ. ನಿಶಾರಾಣಿ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ ವಿಭಾಗದ ಆಂತರಿಕ ಗುಣಮಟ್ಟ ಖಾತ್ರಿ ಸಮಿತಿ ಹಾಗೂ ಸಾಧನ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾನವೀಯ ಮೌಲ್ಯಗಳು ಮತ್ತು ವೃತ್ತಿಪರ ನೈತಿಕತೆ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಹಿರಿಯರು, ತಂದೆ, ತಾಯಿ, ಶಿಕ್ಷಕರಿಗೆ ಗೌರವ ಕೊಡಬೇಕು. ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ತಾನಾಗಿಯೇ ಸಾಧನೆ ಮಾಡಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯ ಕಡಿಮೆಯಾಗುತ್ತಿದೆ. ಸಾಧನೆಗೆ ನಿರಂತರ ಪರಿಶ್ರಮ ಅಗತ್ಯವಾಗಿದ್ದು ಇದನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ಸಾಧನೆಗೆ ಯೋಗ, ಯೋಗ್ಯತೆ ಮುಖ್ಯ. ಛಲ ಹಾಗೂ ಗುರಿ ಇರಬೇಕು ಎಂದರು. ಮೈಸೂರಿನ ರಾಮಕೃಷ್ಣ ಆಶ್ರಮದ ಮಹಾಮೇದಾನಂದ ಗುರೂಜಿ, ಇಷ್ಟನಾಥಾನಂದ ಸ್ವಾಮೀಜಿ, ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು, ಸಾಧನ ಸಂಸ್ಥೆಯ ನಿರ್ದೇಶಕ ಟಿ.ಜೆ. ಸುರೇಶ್, ರಾಜ್ಯಶಾಸ ವಿಭಾಗದ ಮುಖ್ಯಸ್ಥೆ ಡಾ.ಎ.ಆರ್. ಸುಷ್ಮಾ, ಆಂತರಿಕ ಗುಣಮಟ್ಟ ಖಾತ್ರಿ ಸಮಿತಿಯ ಸಂಚಾಲಕಿ ರೇವಣಾಂಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net