

ಹನೂರು: ತಾಲೂಕಿನ ಕೌದಳ್ಳಿ ಸಮೀಪದ ಸತ್ತಾರಮೇಡು ಗ್ರಾಮದ ಬಳಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯು ಕೆರೆಗೆ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತಮಿಳುನಾಡಿನಿಂದ ಸಿಮೆಂಟ್ ತುಂಬಿಕೊಂಡು ಬೆಳಗ್ಗೆ 8.30ರಲ್ಲಿ ಮಂಡ್ಯದ ಕಡೆಗೆ ತೆರಳುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಸತ್ತಾರ ಮೇಡು ಗ್ರಾಮದ ಬಳಿ ರಸ್ತೆಯ ಬದಿಯಲ್ಲಿನ ಕೆರೆಗೆ ಮಗುಚಿದೆ. ಕೆರೆಯಲ್ಲಿ ನೀರಿದ್ದ ಕಾರಣ ಸಿಮೆಂಟ್ ಹಾಳಾಗಿದ್ದು, ಲಕ್ಷಾಂತರ ರೂ.ನಷ್ಟವಾಗಿದೆ.