ಹರದನಹಳ್ಳಿಯಲ್ಲಿ ಜನಸಂಪರ್ಕ ಸಭೆ

14raju8
Published on

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಚೇರಿಯಲ್ಲಿ ಮಂಗಳವಾರ ಜನಸಂಪರ್ಕ ಸಭೆ ನಡೆಯಿತು.


ಅೀಕ್ಷಕ ಇಂಜಿನಿಯರ್ ಸೋಮರಾಜ್ ಮಾತನಾಡಿ, ಮುಂದಿನ ದಿನಗಳಲ್ಲಿ ಬೇಸಿಗೆ ಕಾಲ ಬರುತ್ತಿದ್ದು, ಜಮೀನುಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿರುವ ಕಡೆ ಕಬ್ಬುಬೆಳೆದಿರುವ ರೈತರು ಎಚ್ಚರಿಕೆ ವಹಿಸಬೇಕು ಎಂದರು.
ಅಮಚವಾಡಿ ಗ್ರಾಮದ ರೈತ ಗೋವಿಂದರಾಜು ಮಾತನಾಡಿ, ನಾನು ನನ್ನ ಕುಟುಂಬದೊಂದಿಗೆ ಜಮೀನಿನಲ್ಲಿ ವಾಸ ಮಾಡುತ್ತಿದ್ದೇನೆ. ನಮಗೆ ರಾತ್ರಿ ವೇಳೆಯಲ್ಲಿ ಸರಿಯಾಗಿ ವಿದ್ಯುತ್ ಸೌಲಭ್ಯ ದೊರೆಯುತ್ತಿಲ್ಲ ಎಂದು ತಿಳಿಸಿದರು. ಲಕ್ಷ್ಮಿಪುರ ಗ್ರಾಮದ ಮಂಜುನಾಥ ಮಾತನಾಡಿ, ಜಮೀನುಗಳಲ್ಲಿ ಶಿಥಿಲಗೊಂಡಿರುವ ಕಂಬಗಳು, ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.


ಹರದನಹಳ್ಳಿ ಗ್ರಾಮಸ್ಥ ಚಿಕ್ಕಬಸವಣ್ಣನಾಯ್ಕ ತನ್ನ ನಿವೇಶನದಲ್ಲಿ ಅಳವಡಿಸಿರುವ ವಿದ್ಯುತ್ ಪ್ರವರ್ತಕವನ್ನು ಸ್ಥಳಾಂತರಗೊಳಿಸಬೇಕೆಂದು ಕೋರಿದರು. ಅೀಕ್ಷಕ ಇಂಜಿನಿಯರ್ ಸೋಮರಾಜ್ ಎಲ್ಲ ದೂರುಗಳನ್ನು ಇತ್ಯರ್ಥ ಮಾಡುವಂತೆ ಅಕಾರಿಗಳಿಗೆ ಸೂಚನೆ ನೀಡಿದರು. ಹರದನಹಳ್ಳಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದ್ರುಪದ್, ಕಿರಿಯ ಇಂಜಿನಿಯರ್‌ಗಳಾದ ವಸಂತ್‌ಕುಮಾರ್, ಉಡಿಗಾಲ ಸಿದ್ದನಗೌಡ, ಪ್ರದೀಪ್‌ಕುಮಾರ್, ಸತೀಶ್, ತಿಮ್ಮರಾಜು ಮತ್ತು ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net