ಬಸ್ ಡಿಕ್ಕಿಯಾಗಿ 6 ಜನರಿಗೆ ತೀವ್ರ ಗಾಯ

24 HANUR 3
Published on

ಹನೂರು: ತಾಲೂಕಿನ ಎಲ್ಲೇಮಾಳ- ಹನೂರು ಮಾರ್ಗಮಧ್ಯೆ ಶುಕ್ರವಾರ ಸಂಜೆ ಬಸ್ ಹಾಗೂ ಗೂಡ್ಸ್ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಗು ಸೇರಿದಂತೆ 6 ಜನರು ಗಾಯಗೊಂಡಿದ್ದಾರೆ.


ಮೈಸೂರಿನ ಟಿ.ಕೆ. ಲೇಔಟ್‌ನ ಜನತಾನಗರದ ಮಹದೇವಮ್ಮ (65), ಮಂಜುಳಾ (42), ಪೂಜಾ (28), ಜಯಲಕ್ಷ್ಮೀ (17), ಭವಿತ್ (13), ಸಾತ್ವಿಕ್ (2) ಗಾಯಗೊಂಡವರು. ಚಾಲಕ ಮಧು ಅಪಾಯದಿಂದ ಪಾರಾಗಿದ್ದಾರೆ.
ಇವರೆಲ್ಲ ಸಂಜೆ 5.30ರಲ್ಲಿ ಮ.ಬೆಟ್ಟಕ್ಕೆ ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಎಲ್ಲೇಮಾಳ ಗ್ರಾಮ ಸಮೀಪದ ಆಂಜನೇಯ ಸ್ವಾಮಿ ದೇಗುಲದ ಬಳಿ ಎದುರಿಗೆ ಬಂದ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಆಟೋ ಮಗುಚಿ ಗಾಯಗೊಂಡರು.

ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರ ಸಹಕಾರ ಪಡೆದು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ಕಳುಹಿಸಿದರು. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಗಾಯಗೊಂಡ ಜಯಲಕ್ಷ್ಮೀ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಮೈಸೂರು ಆಸ್ಪತ್ರೆಗೆ ಕಳುಹಿಸಲಾಯಿತು. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net