ಮೇ.27 ರಂದು ಗುಂಡ್ಲುಪೇಟೆಯಲ್ಲಿ ಗಾಯನೋತ್ಸವ

cb6e7eb5-0489-468e-a1d3-18f96312359a
Published on

ಚಾಮರಾಜನಗರ: ಜನ ಚೈತನ್ಯ ಫೌಂಡೇಶನ್ ವತಿಯಿಂದ ಮೇ.27 ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಹಾಡೊಂದು ನಾ ಹಾಡುವೆನು ಸೀಜನ್-2 ಗಾಯನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಆರ್.ಲಕ್ಷ್ಮಣ್ ಹೇಳಿದರು.

ಪಟ್ಟಣದ ಶ್ರೀ ವೆಂಕಟೇಶ್ವರ ಕಲಾ ಮಂದಿರದ 13ನೇ ವಾರ್ಷಿಕೋತ್ಸವದ ಅಂಗವಾಗಿ ಗಾಯನೋತ್ಸವ ಆಯೋಜಿಸಲಾಗಿದೆ.ಅಂದು ಸಂಜೆ 4 ಗಂಟೆಯಿಂದ ರಾತ್ರಿ 9ರವರೆಗೆ ಪಟ್ಟಣದ ಶ್ರೀವೆಂಕಟೇಶ್ವರ ಕಲಾಮಂದಿರದಲ್ಲಿ ಗಾಯನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಾಯನೋತ್ಸವ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರೀವೆಂಕಟೇಶ್ವರ ಕಲಾಮಂದಿರದ ಮಾಲೀಕರಾದ ದಶರಥಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಚರ್ಮರೋಗ ತಜ್ಞ ಡಾ.ಕೆ.ಎ.ಕೆ.ಸುರೇಂದ್ರನ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ರೇಖಾ ಅರುಣ್, ಖ್ಯಾತ ಮನೋವಿಜ್ಞಾನಿ ಡಾ.ರೇಖಾ ಮನಃಶಾಂತಿ, ಇಂಜಿನಿಯರ್ ಅಜರುದ್ದೀನ್, ರಾಜೇಶ್ವರಿ ಚಂದ್ರಶೇಖರ್ ಹಾಗೂ ಇತರರು ಭಾಗವಹಿಸಲಿದ್ದಾರೆ. ವಿಶೇಷ ಗಾಯಕರಾಗಿ ಜೀ ಕನ್ನಡ ಸರಿಗಮಪ ಸೀಸನ್ 19ರ ಸೆಮಿಫೈನಲ್ ಸ್ಪರ್ಧಿಯಾಗಿದ್ದ ಕು.ಯೋಗ ಭಾಗವಹಿಸಲಿದ್ದಾರೆ.

ಗೌರಿ ಓಸ್ವಾಲ್ ಅವರಿಂದ ಭರತನಾಟ್ಯ ಪ್ರದರ್ಶನವಿರುತ್ತದೆ. ಕಾರ್ಯಕ್ರಮದಲ್ಲಿ ಹಲವು ಗಾಯಕರು ಕನ್ನಡ, ಹಿಂದಿ, ತೆಲುಗು, ತಮಿಳು ಚಲನಚಿತ್ರ ಗೀತೆಗಳಿಂದ ಆಯ್ದ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಶ್ರೀವೆಂಕಟೇಶ್ವರ ಕಲಾಮಂದಿರ ವ್ಯವಸ್ಥಾಪಕ ಶೈಲರಾಜು, ಸೌಂಡ್ ಇಂಜಿನಿಯರ್ ಎಸ್.ಕುಮಾರ ಪ್ರಸನ್ನ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net