

ಗುಂಡ್ಲುಪೇಟೆ: ತಾಲೂಕಿನ ಲಕ್ಕೂರು ಸಮೀಪ ಸೋಮವಾರ ರಾತ್ರಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ದೊಡ್ಡಮೋಳೆ ಗ್ರಾಮದ ಸುನೀಲ್, ಮಹದೇವಸ್ವಾಮಿ ಗಾಯಗೊಂಡವರು. ಲಕ್ಕೂರು ಸಮೀಪ ಕೆಟ್ಟು ನಿಂತಿದ್ದ ಕರಿಕಲ್ಲು ಸಾಗಿಸುತ್ತಿದ್ದ ಲಾರಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ತೆರಕಣಾಂಬಿ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.