ಚಾ.ನಗರದಲ್ಲಿ ಗೃಹಲಕ್ಷ್ಮಿ ಯೋಜನೆ ನೋಂದಣಿ ಕೇಂದ್ರಗಳು ಎಷ್ಟಿವೆ?

d455205b-639d-4054-9fbe-b9a77137adc5
Published on

ಚಾಮರಾಜನಗರ: ಜಿಲ್ಲೆಯಲ್ಲಿ ಚಾ.ನಗರದಲ್ಲಿ ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ 115 ಗ್ರಾಮ ಒನ್, 130 ಬಾಪೂಜಿ ಸೇವಾ ಕೇಂದ್ರ, 7 ಕರ್ನಾಟಕ ಒನ್, ಸ್ಥಳೀಯ ಸಂಸ್ಥೆಗಳು ಪಟ್ಟಣಗಳಲ್ಲಿ ತೆರೆದಿರುವ 18 ಕೇಂದ್ರಗಳು ಸೇರಿದಂತೆ ಒಟ್ಟು 270 ಸೇವಾ ಕೇಂದ್ರಗಳಿವೆ.

ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ 40 ಗ್ರಾಮ ಒನ್, 43 ಬಾಪೂಜಿ ಸೇವಾ ಕೇಂದ್ರ, 2 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 6 ಕೇಂದ್ರಗಳು ಸೇರಿ ಒಟ್ಟಾರೆ 91 ಸೇವಾ ಕೇಂದ್ರಗಳಿವೆ. ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ 24 ಗ್ರಾಮ ಒನ್, 34 ಬಾಪೂಜಿ ಸೇವಾ ಕೇಂದ್ರ, 2 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 3 ಕೇಂದ್ರಗಳು ಸೇರಿ ಒಟ್ಟಾರೆ 63 ಸೇವಾ ಕೇಂದ್ರಗಳಿವೆ.

ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ 16 ಗ್ರಾಮ ಒನ್, 16 ಬಾಪೂಜಿ ಸೇವಾ ಕೇಂದ್ರ, 2 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 5 ಕೇಂದ್ರಗಳು ಸೇರಿ ಒಟ್ಟಾರೆ 39 ಸೇವಾ ಕೇಂದ್ರಗಳಿವೆ. ಹನೂರು ತಾಲೂಕು ವ್ಯಾಪ್ತಿಯಲ್ಲಿ 28 ಗ್ರಾಮ ಒನ್, 25 ಬಾಪೂಜಿ ಸೇವಾ ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 2 ಕೇಂದ್ರಗಳು ಸೇರಿ ಒಟ್ಟಾರೆ 55 ಸೇವಾ ಕೇಂದ್ರಗಳಿವೆ. ಯಳಂದೂರು ತಾಲೂಕು ವ್ಯಾಪ್ತಿಯಲ್ಲಿ 7 ಗ್ರಾಮ ಒನ್, 12 ಬಾಪೂಜಿ ಸೇವಾ ಕೇಂದ್ರ, 1 ಕರ್ನಾಟಕ ಒನ್, ನಗರ ಸ್ಥಳೀಯ ಸಂಸ್ಥೆಗಳು ಪಟ್ಟಣದಲ್ಲಿ ತೆರೆದಿರುವ 2 ಕೇಂದ್ರಗಳು ಸೇರಿ ಒಟ್ಟಾರೆ 22 ಸೇವಾ ಕೇಂದ್ರಗಳಿವೆ.

ಫಲಾನುಭವಿಗಳಿಗೆ ನೆರವು ಹಾಗೂ ಮಾಹಿತಿಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲಾ ಸಹಾಯವಾಣಿ ಸಂಖ್ಯೆ 08226-223160 ಆಗಿದೆ. ಚಾಮರಾಜನಗರ ತಾಲೂಕು 08226-200254, ಗುಂಡ್ಲುಪೇಟೆ ತಾಲೂಕು 08229-222225, ಯಳಂದೂರು ತಾಲೂಕು 08226-240029, ಕೊಳ್ಳೇಗಾಲ ತಾಲೂಕು 08224-252042, ಹನೂರು ತಾಲೂಕು 08224-268032 ಸಹಾಯವಾಣಿ ಸಂಖ್ಯೆಯಾಗಿದೆ. ಪ್ರತಿ ಫಲಾನುಭವಿಯ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ನಂಬರ್‌ಗೆ ಎಸ್.ಎಂ.ಎಸ್. ಮೂಲಕ ಸಂದೇಶ ಕಳುಹಿಸಿಯೂ ಸಹ ಮಾಹಿತಿ ಪಡೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net