

ಚಾಮರಾಜನಗರ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯಲು ಗುರುವಾರದಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಮೊದಲ ದಿನವೇ ಅರ್ಜಿ ಸಲ್ಲಿಕೆಗೆ ಮಹಿಳೆಯರು ಮುಂದಾದರು.
ನಗರದ ಸತ್ತಿ ರಸ್ತೆಯಲ್ಲಿರುವ ಡಿ.ದೇವರಾಜ್ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ನೋಂದಣಿ ಮಾಡಿಸಲು ಮಹಿಳೆಯರು ಆಗಮಿಸಿದ್ದರು.
ನಗರದಲ್ಲಿ ಸಾಂಕೇತಿಕವಾಗಿ ಇಲಾಖೆಯಿಂದ ಆಯ್ಕೆ ಮಾಡಿದ ಮಹಿಳೆಯರು ಪಡಿತರ ಚೀಟಿ, ಆಧಾರ್‌ಕಾರ್ಡ್ ಹಾಗೂ ಮೊಬೈಲ್‌ನೊಂದಿಗೆ ಸೇವಾ ಕೇಂದ್ರದಲ್ಲಿ ನೆರೆದಿದ್ದರು. ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳೆಯರಿಗೆ 2000 ರೂ. ಹಣ ನೀಡುವ ಯೋಜನೆಯ ಸದುಪಯೋಗಕ್ಕಾಗಿ ಅರ್ಜಿಯನ್ನು ಪಡೆದುಕೊಂಡು ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾದರು.