ಮೇ 27ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Published on

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಚಾಮರಾಜನಗರ, ಹರದನಹಳ್ಳಿ ಮತ್ತು ಸಂತೇಮರಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಒಂದನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಮೇ 27 ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ದೊಡ್ಡರಾಯಪೇಟೆ ವ್ಯಾಪ್ತಿಯ ಚಾಮರಾಜನಗರ ಟೌನ್-1, ಕೋಡಿಮೋಳೆ, ರಾಮಸಮುದ್ರ, ಮಾದಾಪುರ, ಕಾಗಲವಾಡಿ, ಸೋಮವಾರಪೇಟೆ(ಟೌನ್-2), ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ಗೂಳಿಪುರ ಎನ್.ಜೆ.ವೈ, ಸಂತೇಮರಹಳ್ಳಿ ವ್ಯಾಪ್ತಿಯ ಹೊನ್ನೂರು, ಕುದೇರು, ಉಮ್ಮತ್ತೂರು, ಸಂತೇಮರಹಳ್ಳಿ, ಕೆಂಪನಪುರ, ನವಿಲೂರು, ದುಗ್ಗಟ್ಟಿ, ಆಲ್ದೂರು, ಅಂಬಳೆ, ಮಂಗಲ ವಾಟರ್ ಸಪ್ಲೈ, ಚುಂಗಡಿಪುರ, ಅವಿತ್ ಗ್ರೀನ್ ಸೋಲಾರ್, ಮೂಡಲ ಅಗ್ರಹಾರ ಹಾಗೂ ಅಟ್ಟುಗೂಳಿಪುರ ವ್ಯಾಪ್ತಿಯ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬಂಧಿಗೌಡನಹಳ್ಳಿ, ಅಟ್ಟುಗೂಳಿಪುರ, ಹೊನ್ನಳ್ಳಿ ವ್ಯಾಪ್ತಿಯ ಕೊತ್ತಲವಾಡಿ, ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಬಿಸಿಲವಾಡಿ, ಪುಣಜನೂರು, ಡೊಳ್ಳಿಪುರ, ಚನ್ನಪನಪುರ, ಅಮಚವಾಡಿ, ಮಾದಲವಾಡಿ ಮತ್ತು ಅರಕಲವಾಡಿ ವ್ಯಾಪ್ತಿಯ ಕಿಲಿಗೆರೆ, ಮಾದಲವಾಡಿ, ಯನಗುಂಬ, ಯರಗನಹಳ್ಳಿ, ಅಚ್ಚಟ್ಟಿಪುರ, ಯಾನಗಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net