ತಮ್ಮ ಮತವನ್ನು ತಾವೇ ಹಾಕಿಕೊಳ್ಳದ ಅಭ್ಯರ್ಥಿಗಳು

10raju9
Published on

ಚಾಮರಾಜನಗರ: ಸ್ಪರ್ಧಿಸುವ ಕ್ಷೇತ್ರ ಬೇರೆ- ವಿಳಾಸ, ಹುಟ್ಟೂರು ಬೇರೆ ಹಿನ್ನೆಲೆಯಲ್ಲಿ ತಮ್ಮ ಮತ ಬೇರೆಯವರಿಗೆ ಹಾಕುವ ಅಭ್ಯರ್ಥಿಗಳು..!


ನಂಜನಗೂಡು ಕ್ಷೇತ್ರದ ಕೈ ಸ್ಪರ್ಧಾಳು ದರ್ಶನ್ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಗ್ಗವಾಡಿ ಗ್ರಾಮದಲ್ಲಿ ಮತದಾನ ಮಾಡಿದರು. ಚಾಮರಾಜನಗರ ಶಾಸಕ, ಕೈ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಳಂದೂರಿನ ಉಪ್ಪಿನಮೋಳೆಯಲ್ಲಿ ಮತ ಚಲಾಯಿಸಿದರು. ಕೊಳ್ಳೇಗಾಲದಲ್ಲಿ ತೀವ್ರ ಪೈಪೋಟಿ ಕೊಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಚಾಮರಾಜನಗರ ಕ್ಷೇತ್ರ ಆಲೂರು ಗ್ರಾಮದಲ್ಲಿ ಮತ ಚಲಾವಣೆ ಮಾಡಿದರು. ಕೊಳ್ಳೇಗಾಲದ ಜೆಡಿಎಸ್ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮಾಡಿದರು. ಕನ್ನಡ ಚಳವಳಿಗಾರ, ಚಾಮರಾಜನಗರ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಬೆಂಗಳೂರಲ್ಲಿ ಮತ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net