ಮತ ಚಲಾಯಿಸಿದ ಸೋಲಿಗರು

10raju15
Published on

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲಿಗರ ಹಾಡಿಗಳಲ್ಲಿ ತೆರೆಯಲಾಗಿದ್ದ ಮತಗಟ್ಟೆಗಳಲ್ಲಿ ಸೋಲಿಗರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.

ಹಾಡಿಗಳ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ಪುರುಷರು ಹಾಗೂ ಮಹಿಳಾ ಮತದಾರರು ಮತದಾನ ಮಾಡಿದರು. ಹಾಡಿಗಳಿಂದ ಮತಗಟ್ಟೆಗಳಿಗೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿತ್ತು. ಅದಲ್ಲದೇ ವೈಯಕ್ತಿಕ ಬೈಕ್, ಇತರ ವಾಹನಗಳು ಹಾಗೂ ಕೆಲವರು ನಡೆದುಕೊಂಡು ಬಂದು ತಮ್ಮ ಮತವನ್ನು ಚಲಾಯಿಸಿದರು. ಮತದಾರರು ಸಂಭ್ರಮದಿಂದ ಜನತಂತ್ರದ ಹಬ್ಬ ಆಚರಿಸುವಂತಾಗಬೇಕು. ಮತದಾರರು ಶೇ.100ರಷ್ಟು ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಬೇಕು ಎಂಬ ಉದ್ದೇಶದಿಂದ ಬುಡಕಟ್ಟು ಜನರ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ಮತಗಟ್ಟೆಗಳನ್ನು ಆಕರ್ಷಕವಾಗಿ ರೂಪುಗೊಳಿಸಲಾಗಿತ್ತು.

ಗುಂಡ್ಲುಪೇಟೆಯಲ್ಲಿ ಎಥ್ನಿಕ್ ಮತಗಟ್ಟೆ
ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ಎಥ್ನಿಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಸೋಲಿಗರು ಸಂಭ್ರಮದಿಂದ ಮತ ಚಲಾವಣೆ ಮಾಡುತ್ತಿದ್ದಾರೆ. ಮತಗಟ್ಟೆಯತ್ತ ವನವಾಸಿಗಳನ್ನು ಸೆಳೆಯುವ ಉದ್ದೇಶದಿಂದ ಸ್ವಾಗತ ಕಮಾನು, ಬಣ್ಣಬಣ್ಣದ ಬಾವುಟಗಳು, ಜನಪದ ಚಿತ್ರಗಳನ್ನು ಮತಗಟ್ಟೆಯಲ್ಲಿ ರಚಿಸಿ ಹೊಸ ಲುಕ್ ಕೊಟ್ಟಿದ್ದು ಸೋಲಿಗರು ಸಂಭ್ರಮದಿಂದ ಮತ ಚಲಾವಣೆ ಮಾಡುತ್ತಿದ್ದಾರೆ. ಹಿರಿಯರು, ಅಂಗವಿಕಲರಿಗಾಗಿ ವೀಲ್ ಚೇರ್‌ವ್ಯವಸ್ಥೆ ಕೂಡ ಮಾಡಿದ್ದು ಸೋಲಿಗರು ಉತ್ಸಾಹದಿಂದ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net