ಯುವ ಮತದಾರರ ಸಂಭ್ರಮ

10raju6
Published on

ಚಾಮರಾಜನಗರ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು.

ಮೊದಲ ಬಾರಿಗೆ ಮತದಾನದಲ್ಲಿ ಭಾಗವಹಿಸಿದ್ದ ಯುವ ಮತದಾರರು ಉತ್ಸುಕತೆಯಿಂದ ಹಕ್ಕು ಚಲಾಯಿಸಿ ಸಂಭ್ರಮಿಸಿದರು.
ಚಾಮರಾಜನಗರ, ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಿ, ಭವಿಷ್ಯದ ಗುಣಗಾನ ಮಾಡಿದರು. ಮತದಾನದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮೊದಲ ಬಾರಿಗೆ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವುದಕ್ಕೆ ಖುಷಿಪಟ್ಟರು.


ತಮ್ಮ ಮೊದಲ ಆಯ್ಕೆಯನ್ನು ಸಮರ್ಥ, ಯೋಗ್ಯ ಅಭ್ಯರ್ಥಿಗೆ ನೀಡಿರುವುದಾಗಿ ತಿಳಿಸಿದರು. ಭವಿಷ್ಯದಲ್ಲಿ ಕ್ಷೇತ್ರಗಳ ಅಭಿವೃದ್ಧಿಗೆ ಮತದಾನ ಎಷ್ಟು ಅವಶ್ಯಕ ಎನ್ನುವುದನ್ನು ಮನಗಂಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಕ್ರಿಯೆಯ ಶ್ರೇಷ್ಠತೆಯನ್ನು ಯುವ ಮತದಾರರು ಅರಿತಿದ್ದರು. ಈ ಹಿನ್ನೆಲೆಯಲ್ಲಿ ಮತ ಚಲಾವಣೆಯ ಹಕ್ಕನ್ನು ಹೊಣೆಗಾರಿಕೆಯಿಂದ ನಿಭಾಯಿಸಿದರು. ಮತ ಹಾಕಿದ ಮೊದಲ ಅನುಭವದ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net