ನಿತ್ಯ ಯೋಗ ಮಾಡುವುದರಿಂದ ಒತ್ತಡ ಕಡಿಮೆ

05raju8
Published on

ಚಾಮರಾಜನಗರ: ನಿತ್ಯ ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ದಾನೇಶ್ವರಿ ಸಲಹೆ ನೀಡಿದರು.
ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ನೂತನ ಕಟ್ಟಡ ಗೀತಾ ಜ್ಞಾನ ಪಾಠಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಯೋಗ ಸೇವೆಯನ್ನು ಎಲ್ಲರೂ ಬಳಸಿಕೊಳ್ಳಬೇಕು. ಇಲ್ಲಿ ಪ್ರತಿನಿತ್ಯ ರಾಜಯೋಗದ ಕಲಿಕೆ ನಡೆಯುತ್ತದೆ. ರಾಜಯೋಗ, ಧಾನ್ಯ ಮಾಡಿದರೆ ಜೀವನ ಸ್ಪೂರ್ತಿ ಬರುತ್ತದೆ. ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.ರಾಜಯೋಗಿನಿ ಪ್ರಭಾಮಣಿ, ಸಮಾಜ ಸೇವಕ ಎಲ್,ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷ ರಾಜೇಂದ್ರ ಸದಸ್ಯ ಪುಟ್ಟಸ್ವಾಮಿ, ಪಿಡಿಒ ಸಿದ್ದರಾಜು, ಆರಾಧ್ಯ, ಭಾಗ್ಯ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net