

ಚಾಮರಾಜನಗರ: ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು.
ನಗರದ ದೇವರಾಜ ಅರಸು ಭವನದ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವಾರದವರಗೆ ಬರುವವರಿಗೆ ಅರ್ಜಿ ಸ್ವೀಕಾರ ಮಾಡುತ್ತೇವೆ. ಆ ಬಳಿಕ ಎಲ್ಲೆಲ್ಲಿ ಕಡಿಮೆ ಅರ್ಜಿ ಸಲ್ಲಿಕೆಯಾಗಿದೆ ಎಲ್ಲಿಗೆ ನಾವೇ ಖುದ್ದು ಭೇಟಿ ನೀಡುತ್ತೇವೆ ಎಂದರು.
ಎರಡನೇ ಹಂತದಲ್ಲಿ ನಾವೇ ಮನೆ ಮನೆಗೆ ಹೋಗಿ ಅರ್ಜಿ ಸಲ್ಲಿಸುತ್ತೇವೆ. ಗ್ರಾಮ ಒನ್ ಆಪರೇಟರ್‌ಗಳು ಅರ್ಜಿ ಸಲ್ಲಿಕೆ ಮಾಡಲು ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೀತಿದೆ. ಅವರೂ ಸಹ ಅರ್ಜಿ ಸ್ವೀಕರಿಸುತ್ತಾರೆ. ಸದ್ಯ ಸರ್ಕಾರದ ನಿರ್ದೇಶನ ಏನು ಬಂದಿಲ್ಲ. ಸರ್ವರ್ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ಎಲ್ಲೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಅದನ್ನ ಸರಿ ಪಡಿಸುತ್ತೇವೆ ಎಂದು ಹೇಳಿದರು.