

ಚಾಮರಾಜನಗರ: ಕರೊನಾ ವೈರಸ್ ಅಂತ್ಯದ ಬಗ್ಗೆ ಒಂದಲ್ಲ ಒಂದು ಭವಿಷ್ಯಗಳು ಹೊರಬೀಳುತ್ತಿದ್ದು, ಇದೀಗ ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ ರಾಘವನ್ ಗುರೂಜಿ ಕೂಡ ಮಹಾಮಾರಿ ಕೋವಿಡ್-19ಗೆ ಕೊನೆ ಯಾವಾಗ ಎಂದು ಭವಿಷ್ಯ ನುಡಿದಿದ್ದಾರೆ.
ಜಾಗತಿಕವಾಗಿ ಮೃತ್ಯುಕೂಪ ನಿರ್ಮಿಸಿ ಸಾವಿನ ರಣಕೇಕೆ ಹಾಕುತ್ತಿರುವ ಕಿಲ್ಲರ್ ಕರೊನಾ ಜೂನ್ 30ಕ್ಕೆ ಅಂತ್ಯ ಕಾಣಲಿದ್ದು, ಸೆಪ್ಟೆಂಬರ್ 5ಕ್ಕೆ ಅದರ ಶೇಷಗಳು ಉಳಿಯುವುದಿಲ್ಲ ಎಂದು ರಾಘವನ್ ಗುರೂಜಿ ಹೇಳಿದ್ದಾರೆ.
ಕೊಳ್ಳೇಗಾಲದ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಹವನ ನಡೆಸಿದ ಗುರೂಜಿ, ಕರೊನಾ ವಾರಿಯರ್ಸ್ಗೆ ಹೆಚ್ಚಿನ ಆತ್ಮಸ್ಥೈರ್ಯ ಬರಬೇಕು ಹಾಗೂ ವೈರಸ್ ಎಲ್ಲಾ ದೇಶದಿಂದ ವಿಮುಕ್ತವಾಗಲೆಂದು ಮಹಾಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಸುದರ್ಶನ ಹೋಮ, ಮಹಾ ಧನ್ವಂವತ್ರಿ ಹೋಮ ಹಾಗೂ ಮೃತ್ಯುಂಜಯ ಹೋಮ ಮಾಡಲಾಗಿದೆ ಎಂದರು.
ದ್ವೇಷದ ರಾಜಕೀಯದಿಂದ ಕರೊನಾ ವೈರಸ್ ಹಬ್ಬಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದರು. (ದಿಗ್ವಿಜಯ ನ್ಯೂಸ್)