

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೆಂಕಿಯಿಂದ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಸತ್ಯಾಸತ್ಯತೆ ತಿಳಿದುಕೊಳ್ಳಲು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿರುವುದು ತಡವಾಗಿ ತಿಳಿದುಬಂದಿದೆ.
ಈ ಕುರಿತು ೆ.29ರಂದೇ ಅರಣ್ಯ ಸಚಿವ ಖಂಡ್ರೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಪತ್ರದಲ್ಲಿ ಬಿಆರ್‌ಟಿ ವೃತ್ತದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಕಡೆ ಅಂದರೆ ಬಿಳಿಗಿರಿರಂಗನಬೆಟ್ಟ, ಪುರಾಣಿಪೋಡು, ಮುತ್ತುಗದ ಪೋಡಿನಲ್ಲಿ ಕಾಳ್ಗಿಚ್ಚಿಗೆ ಸುಮಾರು 200 ಎಕರೆ ಪ್ರದೇಶ ಸುಟ್ಟು ಹೋಗಿ ಅಪಾರ ಹಾನಿ ಆಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ತಲುಪಿದೆ ಎಂದಿದ್ದಾರೆ.
ಆದರೆ, 10 ಎಕರೆ ಪ್ರದೇಶದಲ್ಲಿ ಮಾತ್ರವೇ ಕಾಡಿನ ಬೆಂಕಿ ಕಾಣಿಸಿಕೊಂಡಿದೆ ಎಂದು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಸತ್ಯಾಸತ್ಯತೆ ತಿಳಿಯಲು ನೋಡಲ್ ಅಧಿಕಾರಿಯನ್ನು ಕಳುಹಿಸಿ, ತಪಾಸಣೆ ಮಾಡಿಸಿ, ಹಾನಿಯ ಪ್ರಮಾಣದ ಕುರಿತಂತೆ 4 ಕರ್ತವ್ಯದ ದಿನಗಳ ಒಳಗಾಗಿ ವರದಿಯನ್ನು ಕಡತದಲ್ಲಿ ಮಂಡಿಸಲು ಸೂಚಿಸಿರುವುದಾಗಿ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ವಿಜಯವಾಣಿಯೊಂದಿಗೆ ಮಾತನಾಡಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ವಾಸ್ತವವಾಗಿ ಎಷ್ಟು ಪ್ರದೇಶ ಸುಟ್ಟುಹೋಗಿದೆ ಎಂಬ ವರದಿಯನ್ನು ನಾವು ಸಿದ್ಧಪಡಿಸುತ್ತಿದ್ದೇವೆ. ಪಿಸಿಸಿಎ್ಗೆ ಈ ವರದಿಯನ್ನು ನೀಡುತ್ತೇವೆ. ಸಚಿವರ ಸೂಚನೆ ಮೇರೆಗೆ ನೋಡಲ್ ಅಧಿಕಾರಿ ಬರಬಹುದು ಎಂದಿದ್ದಾರೆ.