ಮೌಂಟ್ ಅಬುಗೆ 23 ಜನರ ಪ್ರಯಾಣ

24raju6
Published on

ಚಾಮರಾಜನಗರ: ರಾಜಸ್ಥಾನದ ಮೌಂಟ್ ಅಬುವಿನಲ್ಲಿ 3 ದಿನಗಳವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ರಾಜಯೋಗ ಸಮ್ಮೇಳನದಲ್ಲಿ ಭಾಗಿಯಾಗಲು ನಗರದಿಂದ 23 ಜನರ ತಂಡ ಪ್ರಯಾಣ ಬೆಳೆಸಿದರು.

ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಕೇಂದ್ರಕ್ಕೆ 23 ಜನರ ತಂಡ ಭೇಟಿ ನೀಡಲು ಹೊರಟಿದ್ದು, ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಆಶೀರ್ವದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ಪ್ರಮೀಳಾ ಊದಗಡ್ಡಿ ನೇತೃತ್ವದಲ್ಲಿ ಹೊರಟಿರುವ ತಂಡವು ವಡೋದರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾಮೂರ್ತಿ, ಅಹಮದಾಬಾದ್ ನಲ್ಲಿರುವ ಸ್ವಾಮಿನಾರಾಯಣ ದೇವಾಲಯ, ಗಾಂಧೀಜಿ ಸಾಬರಮತಿ ಆಶ್ರಮವನ್ನು ವೀಕ್ಷಿಸಿ, ಮೌಂಟ್ ಅಬುವಿನ ಡೈಮಂಡ್ ಜ್ಯುಬಿಲಿ ಹಾಲ್ನಲ್ಲಿ 3 ದಿನಗಳವರೆಗೆ ಅಂತಾರಾಷ್ಟ್ರೀಯ ರಾಜಯೋಗದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನಂತರ ಅಬು ದರ್ಶನ, ಉದಯಪುರದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ 30 ರಂದು ವಾಪಸ್ ಆಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net