ಚಾಮರಾಜನಗರ: ನೆಹರು ಯುವ ಕೇಂದ್ರವು 2021-22ನೇ ಸಾಲಿನ ಯುವ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಯುವ ಸಂಘಟನೆ, ಯುವತಿ ಮಂಡಳಿಗೆ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಯುವಕ, ಯುವತಿ ಮಂಡಳಿಯು ಯುವಜನ ಚಟುವಟಿಕೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ, ಸಮಾಜ ಸೇವೆ, ಜಾಗೃತಿ ಕಾರ್ಯಕ್ರಮದ ಶಿಬಿರಗಳು, ವಿವಿಧ ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಸಂಘಟಿಸಿರಬೇಕು. ಮಂಡಳಿಯು ರಾಜ್ಯ ಸಂಘಗಳ ನೋಂದಣಿ ಕಾಯ್ದೆ-1960 ರಡಿಯಲ್ಲಿ ನೋಂದಣಿಯಾಗಿ ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡು 3 ವರ್ಷ ಪೂರ್ಣಗೊಳಿಸಿರಬೇಕು. 2021-22ನೇ ಸಾಲಿಗಾಗಿ ನವೀಕರಣಗೊಂಡಿರಬೇಕು.
ಯುವ ಮಂಡಳಿ ಪ್ರಶಸ್ತಿಗಾಗಿ ಮಂಡಳಿ ಸದಸ್ಯರು 15ರಿಂದ 29ರ ವಯೋಮಿತಿಯಲ್ಲಿರಬೇಕು. ಪ್ರಶಸ್ತಿಯು 25 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ಹೊಂದಿರುತ್ತದೆ. ಆಸಕ್ತ ಯುವ ಸಂಘಟನೆಗಳು, ಮಹಿಳಾ ಮಂಡಳಿಗಳು ಡಿ.20ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿಗಳು ದೂ.ಸಂ 08226-222120 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.