ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ಮೂವರಿಗೆ ಗಾಯ

006
Published on

ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗೇಟ್‌ನಲ್ಲಿ ಭಾನುವಾರ ಎರಡು ಬೈಕುಗಳ ನಡುವೆ ಅಪಘಾತ ಸಂಭವಿಸಿ ಆಂಧ್ರಪ್ರದೇಶ ಮೂಲದ ಯುವತಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಕೇಶವ, ಸ್ನೇಹಾ ಹಾಗೂ ಭೀಮನಬೀಡು ಗ್ರಾಮದ ಗೋಪಾಲಶೆಟ್ಟಿ ಗಾಯಗೊಂಡವರು. ಕೇರಳದಿಂದ ಬೈಕ್‌ನಲ್ಲಿ ಪಟ್ಟಣದತ್ತ ಬರುತ್ತಿದ್ದ ಕೇಶವ ಎಂಬುವರಿಗೆ ಎದುರಿನಿಂದ ಬರುತ್ತಿದ್ದ ಭೀಮನಬೀಡು ಗ್ರಾಮದ ಗೋಪಾಲಶೆಟ್ಟಿ ಎಂಬುವರ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಸ್ನೇಹಾ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಯಿತು. ಗೋಪಾಲಶೆಟ್ಟಿ ಹಾಗೂ ಕೇಶವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net