ಯೋಗದಿಂದ ಆರೋಗ್ಯ ವೃದ್ಧಿ

22raju4
Published on

ಚಾಮರಾಜನಗರ: ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯನ ಆರೋಗ್ಯ ಉತ್ತಮವಾಗಲಿರಲಿದೆ ಎಂದು ಕರಡಿಮೋಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಿ.ಎಸ್.ಲತಾ ಹೇಳಿದರು.


ತಾಲೂಕಿನ ಕರಡಿಮೋಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಿನದಲ್ಲಿ ಒಂದು ತಾಸು ಯೋಗ ಮಾಡಿದರೆ ಆರೋಗ್ಯ ಸಧೃಡವಾಗಿರಲಿದೆ. ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುವುದರಿಂದ ದೇಹ ಹಗುರಾಗಿ ಇರಲಿದೆ. ಜತೆಗೆ ಮನಸ್ಸು ಹಗುರಾಗಿ ಇರಲಿದೆ ಎಂದರು. ಇದೇ ವೇಳೆ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಸಹ ಶಿಕ್ಷಕ ಸೋಮಣ್ಣ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net