30ರಂದು ದಲಿತ ಪರ ಸಂಘಟನೆಗಳಿಂದ ಸಭೆ

Published on

ಚಾಮರಾಜನಗರ: ಡಿ.6ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣೆ ಮತ್ತು ದಲಿತರ ರಾಜಕಾರಣ ಮುಂದೆ ಹೇಗೆ ಎಂಬ ಕುರಿತು ಚರ್ಚೆ ಮಾಡಲು ನಗರದ ಶ್ರೀರಾಮಚಂದ್ರ ಪ್ರಶಿಕ್ಷಣಾರ್ಥಿಗಳ ಕಾಲೇಜಿನಲ್ಲಿ ಅ.30ರಂದು ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ.

ಈ ಸಭೆಗೆ ಸಾರಾನಾಥ ಬುದ್ಧ ವಿಹಾರದ ಬೋಧಿದತ್ತ ಬಂತೇಜಿ, ತಿ.ನರಸೀಪುರದ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಮತ್ತು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಗಮಿಸಲಿದ್ದಾರೆ. ತಾಲೂಕಿನ ಎಲ್ಲ ಗ್ರಾಮಗಳ ಯಜಮಾನರು, ಮುಖಂಡರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಸದಸ್ಯರು, ಎಲ್ಲ ಪಕ್ಷಗಳ ಮುಖಂಡರು ಸಭೆಗೆ ಭಾಗವಹಿಸಿ ಯಶ್ವಸಿಗೊಳಿಸಬೇಕೆಂದು ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net