ಯಳಂದೂರಿನಲ್ಲಿ ಲಕ್ಷ್ಮೀ ಪೂಜೆ

ಯಳಂದೂರು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ರಸ್ತೆ ಬದಿಯಲ್ಲಿ ತೆರೆದಿರುವ ಪಟಾಕಿ ಅಂಗಡಿಗಳಲ್ಲಿ ಸೋಮವಾರ ಗ್ರಾಹಕರು ಪಟಾಕಿ ಖರೀದಿಸಿದರು.
ಯಳಂದೂರು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ರಸ್ತೆ ಬದಿಯಲ್ಲಿ ತೆರೆದಿರುವ ಪಟಾಕಿ ಅಂಗಡಿಗಳಲ್ಲಿ ಸೋಮವಾರ ಗ್ರಾಹಕರು ಪಟಾಕಿ ಖರೀದಿಸಿದರು.
Published on: 

ಯಳಂದೂರು: ತಾಲೂಕಿನ ಎಲ್ಲೆಡೆ ದೀಪಾವಳಿ ಹಬ್ಬವನ್ನು ಎರಡನೇ ದಿನವಾದ ಸೋಮವಾರ ಲಕ್ಷ್ಮೀಪೂಜೆ ಮಾಡುವ ಮೂಲಕ ಆಚರಿಸಲಾಯಿತು.

ತಾಲೂಕಿನ ಕಂದಹಳ್ಳಿ ಶ್ರೀ ಮಹದೇಶ್ವರ ದೇಗುಲದಲ್ಲಿ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಪಟ್ಟಣ ಹೊರ ವಲಯದಲ್ಲಿರುವ ಪ್ರವಾಸಿ ಮಂದಿರದ ಮುಂಭಾಗ ತೆರೆದಿರುವ 7 ಪಟಾಕಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯಿತು.