ಭಾರತೀಯ ಕಿಸಾನ್ ಸಂಘಕ್ಕೆ ಮಲಿಯಪ್ಪ ಅಧ್ಯಕ್ಷ

ಹಸಗೂಲಿ ಗ್ರಾಮದಲ್ಲಿ ಹಿರಿಯ ರೈತರಿಗೆ ಸನ್ಮಾನ
ಗುಂಡ್ಲುಪೇಟೆ ತಾಲೂಕಿನ ಹಸಗೂಲಿಯಲ್ಲಿ ಶ್ರೀ ಪಾರ್ವತಾಂಬಾ ಅಮ್ಮನವರ ಸನ್ನಿಧಿಯಲ್ಲಿ ಆಯೋಜಿಸಿದ್ದ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಹಿರಿಯ ರೈತರನ್ನು ಸನ್ಮಾನಿಸಲಾಯಿತು.
ಗುಂಡ್ಲುಪೇಟೆ ತಾಲೂಕಿನ ಹಸಗೂಲಿಯಲ್ಲಿ ಶ್ರೀ ಪಾರ್ವತಾಂಬಾ ಅಮ್ಮನವರ ಸನ್ನಿಧಿಯಲ್ಲಿ ಆಯೋಜಿಸಿದ್ದ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಹಿರಿಯ ರೈತರನ್ನು ಸನ್ಮಾನಿಸಲಾಯಿತು.
Published on: 

ಗುಂಡ್ಲುಪೇಟೆ: ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾಗಿ ತಾಲೂಕಿನ ಹಸಗೂಲಿ ಗ್ರಾಮ ಮಲಿಯಪ್ಪ ಆಯ್ಕೆಯಾಗಿದ್ದಾರೆ. ಗ್ರಾಮದೇವತೆ ಶ್ರೀ ಪಾರ್ವತಾಂಬಾ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ನಂತರ ಆಯ್ಕೆಯನ್ನು ಘೋಷಣೆ ಮಾಡಲಾಯಿತು. ನಂತರ ಗ್ರಾಮದ ಹಿರಿಯ ರೈತರನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷ ಮಲಿಯಪ್ಪ ಮಾತನಾಡಿ, ತಾಲೂಕಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ರೈತರ ಕುಂದುಕೊರತೆಗಳನ್ನು ಅರಿತು ತ್ವರಿತಗತಿಯಲ್ಲಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ಸಂಘದ ಮಾಜಿ ಅಧ್ಯಕ್ಷ ದೊಡ್ಡಹುಂಡಿ ಮಹೇಶ್, ಕಾನೂನು ಸಲಹೆಗಾರ ಪ್ರಭುಸ್ವಾಮಿ, ಕಾರ್ಯದರ್ಶಿ ಎಂ.ಶಶಿಕುಮಾರ್, ಮುಖಂಡರಾದ ಶಾಂತಪ್ಪ ಶಿಂಡನಪುರ, ಕುಮಾರ್ ಶಿಂಡನಪುರ, ಕಸಬಾ ಸೊಸೈಟಿ ಅಧ್ಯಕ್ಷ ಪ್ರಕಾಶ್ ಮೊಳ್ಳಯ್ಯಹಂಡಿ, ಬೇಗೂರು ಹೋಬಳಿ ಅಧ್ಯಕ್ಷ ಮಂಜಪ್ಪ ಹಾಲಹಳ್ಳಿ, ಗೌರವಾಧ್ಯಕ್ಷ ವೀರಭದ್ರಸ್ವಾಮಿ, ತೆರಕಣಾಂಬಿ, ಕಬ್ಬಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಬಸವಣ್ಣ, ಹಕ್ಕಲಪುರ ಸೋಮಣ್ಣ, ಶಿವಕುಮಾರ್ ಹಂಗಳ, ಮಂಜು ಹಂಗಳಪುರ, ಹಾಲಹಳ್ಳಿ ಗುರು, ಕಲ್ಲಹಳ್ಳಿ ನಾಗೇಶ್, ಕುರುಬರಹುಂಡಿ ರಾಜಶೇಖರ ಇದ್ದರು.