ಬೌದ್ಧ ಧರ್ಮದ ಜಾಗೃತಿಗಾಗಿ ಧಮ್ಮ ರಥಯಾತ್ರೆ

ಶಿವಮಲ್ಲು ಮುಳ್ಳೂರು ಮಾಹಿತಿ ಅದ್ದೂರಿ ಸ್ವಾಗತ
ಕೊಳ್ಳೇಗಾಲದ ಮಂಜುನಾಥನಗರ ಬಡಾವಣೆ ಪ್ರವೇಶಿಸಿದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಧಮ್ಮ ಪಯಣದ ಪ್ರಚಾರ ರಥ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು. ಪ್ರಕಾಶ್ ಶಂಕನಪುರ, ಶಿವಮಲ್ಲು ಮು ಳ್ಳೂರು, ರಾಚಪ್ಪಾಜಿ, ಎಂ. ಪಾಪಣ್ಣ, ಸುರೇಶ್, ಪ್ರಕಾಶ್ ಬಸ್ತೀಪುರ  ಇತರರಿದ್ದರು.
ಕೊಳ್ಳೇಗಾಲದ ಮಂಜುನಾಥನಗರ ಬಡಾವಣೆ ಪ್ರವೇಶಿಸಿದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಧಮ್ಮ ಪಯಣದ ಪ್ರಚಾರ ರಥ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು. ಪ್ರಕಾಶ್ ಶಂಕನಪುರ, ಶಿವಮಲ್ಲು ಮು ಳ್ಳೂರು, ರಾಚಪ್ಪಾಜಿ, ಎಂ. ಪಾಪಣ್ಣ, ಸುರೇಶ್, ಪ್ರಕಾಶ್ ಬಸ್ತೀಪುರ ಇತರರಿದ್ದರು.
Published on

ಕೊಳ್ಳೇಗಾಲ: ಪಟ್ಟಣದ ಮಂಜುನಾಥನಗರ ಪ್ರವೇಶಿಸಿದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಧಮ್ಮ ಪಯಣದ ರಥ ಯಾತ್ರೆಗೆ ನಿವಾಸಿಗಳು ಬುಧವಾರ ಪುಷ್ಪಾರ್ಚನೆ ನೆರವೇರಿಸಿ ಅದ್ದೂರಿಯಾಗಿ ಸ್ವಾಗತಿಸಿದರು.

ಸಮ್ಮೇಳನ ಪ್ರಚಾರ ಸಮಿತಿ ಸಂಚಾಲಕ ಶಿವಮಲ್ಲು ಮುಳ್ಳೂರು ಮಾತನಾಡಿ, ಅ.24 ಮತ್ತು 25 ರಂದು ಚಾಮರಾಜನಗರದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೌದ್ಧ ಧರ್ಮದ ಬಗ್ಗೆ ಜನ ಜಾಗೃತಿ ಮೂಡಿಸಲು ಧಮ್ಮ ರಥಯಾತ್ರೆ ನಡೆಸಲಾಗುತ್ತಿದೆ. ಬೌದ್ಧ ಮಹಾಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಶಂಕನಪುರ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯಾಗಿದೆ. ಸಮ್ಮೇಳನ ಯಶಸ್ವಿಗೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.

ಜಿ.ಪಂ.ಮಾಜಿ ಸದದ್ಯ ಕಮಲ್ ನಾಗರಾಜು, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಕಾರ್ಯದರ್ಶಿ ಪಾಪಣ್ಣ, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಶಂಕನಪುರ, ಸುರೇಶ್, ನಾಗವೇಣಿ, ಮುಖಂಡ ರಾಚಪ್ಪಾಜಿ, ಮುಸ್ಲಿಂ ಸಮುದಾಯ ಮುಖಂಡ ಇನಾಯತ್ ಪಾಷ, ಮುಖಂಡರಾದ ಚಾಮರಾಜು, ಮಂಜುನಾಥ ಬಡಾವಣೆಯ ನಿವಾಸಿಗಳಾದ ಚಾಮಣ್ಣ, ಮಂಜು, ಗೋಪಿ, ಮಹದೇವಸ್ವಾಮಿ, ಕಾಂತರಾಜು, ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net