

ಚಾಮರಾಜನಗರ: ಸ್ವಚ್ಛ ಭಾರತ ವಿಕಸಿತ ಭಾರತ ಆಂದೋಲನ ಅ.17ರವರೆಗೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ತಿಳಿಸಿದರು.
ತಾಲೂಕಿನ ಹೆಬ್ಬಸೂರು ಗ್ರಾಮ ಪಂಚಾಯಿತಿಯ ದಡದಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಗಿಡ ಗಂಟೆ ಕಟಾವು ಮಾಡು ಮೂಲಕ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛ ಭಾರತ ವಿಕಸಿತ ಭಾರತ ಆಂದೋಲನದಡಿ ಕಸದ ರಾಶಿ ವಿಲೇವಾರಿ, ಶಾಲೆ, ಕಚೇರಿ, ದೇವಸ್ಥಾನ, ಇನ್ನಿತರ ಕಡೆ ನೈರ್ಮಲ್ಯ ಕಾಪಾಡುವುದು, ಪೌರ ಕಾರ್ಮಿಕರಿಗೆ ಆರೋಗ್ಯ ಶಿಬಿರ ಏರ್ಪಡಿಸಿ ಅವರ ಆರೋಗ್ಯ ಕಾಪಾಡುವುದು, ಪರಿಸರ ಸಂರಕ್ಷಿಸುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಎಂದರು.
ಜಿ.ಪಂ ಉಪ ಕಾರ್ಯದರ್ಶಿ ಶ್ರುತಿ ಮಾತನಾಡಿ, ಗಾಂಧಿಜೀಯ ಆಶಯದಂತೆ ಸ್ವಚ್ಛ ಭಾರತ ವಿಕಸಿತ ಭಾರತದ ಆಶಯದಂತೆ ಪ್ರತಿಯೊಬ್ಬರು ತಪ್ಪದೆ ಶೌಚಗೃಹ ಬಳಸಬೇಕು. ಸುತ್ತಮುತ್ತಲಿನ ಅರೋಗ್ಯಕರ ಪರಿಸರಕ್ಕೆ ಮಹಿಳೆಯರ ಪಾತ್ರ ಬಹುಮುಖ್ಯ ಎಂದರು.
ನಂತರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಂದ ಅಗಮಿಸಿದ್ದ ನೌಕರರು, ಸಿಬ್ಬಂದಿ, ಸ್ಕೌಟ್ ಅಂಡ್ ಗೈಡ್ಸ್, ಮಹಿಳಾ ಒಕ್ಕೂಟ, ನರೇಗಾ, ವಿಬಿ ಜಿ-ರಾಮ್ ಜಿ ಸಿಬ್ಬಂದಿ ಆರೋಗ್ಯ ಇಲಾಖೆ ನೌಕರರು, ಸ್ಥಳೀಯರ ಜತೆಗೂಡಿ ನಂದಿ ಬಸವೇಶ್ವರ ದೇವಸ್ಥಾನದ ಸುತ್ತಮುತ್ತ ಮತ್ತು ಕಲ್ಯಾಣಿ ಸ್ಚಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇಅರಸ್, ಎಇಇ ಜಯಪ್ರಕಾಶ್, ನರೇಗಾ ಸಹಾಯಕ ನಿರ್ದೇಶಕ ಪ್ರಕಾಶ್, ಆಡಳಿತಾಧಿಕಾರಿ ಲೋಹಿತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಜಿತಾ, ಸಿದ್ದರಾಜು, ಗಣೇಶ್, ಭಾಸ್ಕರ್, ಸೋಮಶೇಖರ್, ವಸಂತ, ಗೀತಾ, ಪಂಚಾಯಿತಿ ಸದಸ್ಯರಾದ ಗೋವಿಂದರಾಜು, ಶಿವಣ್ಣ, ಗ್ರಂಥಪಾಲಕ ಬಿ.ಉಮೇಶ್, ರಮೇಶ್, ಡಿ.ಎಸ್,ಸುರೇಶ್, ನಂದೀಶ, ಪುಟ್ಟಸ್ವಾಮಿ, ವೀರಭದ್ರಪ್ಪ, ನಂಜುಂಡೇಗೌಡ, ಇತರರು ಭಾಗವಹಿಸಿದ್ದರು.