ಚಿರತೆ ದಾಳಿಗೆ 4 ಮೇಕೆಗಳು ಬಲಿ

ಬಸಪ್ಪನದೊಡ್ಡಿ ಗ್ರಾಮದಲ್ಲಿ
ಬಸಪ್ಪನದೊಡ್ಡಿಯಲ್ಲಿ ಚಿರತೆ ದಾಳಿಯಿಂದ ಮೇಕೆಗಳು ಮೃತಪಟ್ಟ ಸ್ಥಳಕ್ಕೆ ಡಿಆರ್‌ಎಫ್‌ಒ ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು. ಶಿವಮ್ಮ, ಅಮ್ಜಾದ್ ಖಾನ್ ಇತರರಿದ್ದರು.
ಬಸಪ್ಪನದೊಡ್ಡಿಯಲ್ಲಿ ಚಿರತೆ ದಾಳಿಯಿಂದ ಮೇಕೆಗಳು ಮೃತಪಟ್ಟ ಸ್ಥಳಕ್ಕೆ ಡಿಆರ್‌ಎಫ್‌ಒ ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು. ಶಿವಮ್ಮ, ಅಮ್ಜಾದ್ ಖಾನ್ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಹನೂರು

ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಬುಧವಾರ ಚಿರತೆ ದಾಳಿಗೆ 4 ಮೇಕೆಗಳು ಬಲಿಯಾಗಿವೆ.

ಗ್ರಾಮದ ಶಿವಮ್ಮ ಎಂಬುವರು ಜಮೀನಿನ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕಟ್ಟಿ ಹಾಕಿದ್ದರು. ಬೆಳಗಿನ ಜಾವ ಸಮೀಪದ ಅರಣ್ಯ ಪ್ರದೇಶದಿಂದ ಬಂದ ಚಿರತೆ 4 ಮೇಕೆಗಳ ಮೇಲೆ ದಾಳಿ ನಡೆಸಿ ಎಳೆದೊಯ್ದು ಸಾಯಿಸಿದೆ. ಮೇಕೆಗಳ ಚೀರಾಟದ ಶಬ್ದ ಕೇಳಿ ಮನೆಯವರು ಹೊರ ಬಂದಾಗ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಈ ಬಗ್ಗೆ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್ ಅವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ಡಿಆರ್‌ಎಫ್ ನಂದೀಶ್ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ಈ ವೇಳೆ ಅಮ್ಜಾದ್ ಖಾನ್ ಮಾತನಾಡಿ, ಚಿರತೆ ಸೆರೆ ಹಿಡಿಯುವಂತೆ ಹಾಗೂ ಮೇಕೆಗಳ ಸಾವಿಗೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿದರು. ಇದಕ್ಕೆ ಆರ್‌ಎಫ್‌ಒ ಅವರು ಪ್ರತಿಕ್ರಿಯಿಸಿ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಬೋನು ಇರಿಸಿ ಚಿರತೆ ಸೆರೆಗೆ ಅಗತ್ಯ ಕ್ರಮವಹಿಸಲಾಗುವುದು. ಪರಿಹಾರದ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net