ಕಾಡಾನೆ ದಾಂಧಲೆಗೆ ರಾಗಿ ಮೆದೆ ನಾಶ

ಚಂಗಡಿ ಗ್ರಾಮದ ಜಮೀನೊಂದಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ರಾಗಿ ಹುಲ್ಲಿನ ಮೆದೆಯನ್ನು ಚೆಲ್ಲಾಂಪಿಲ್ಲಿಗೊಳಿಸಿರುವುದು.
ಚಂಗಡಿ ಗ್ರಾಮದ ಜಮೀನೊಂದಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ರಾಗಿ ಹುಲ್ಲಿನ ಮೆದೆಯನ್ನು ಚೆಲ್ಲಾಂಪಿಲ್ಲಿಗೊಳಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾಡಾನೆಗಳಿಂದ ರಾಗಿ ಹುಲ್ಲಿನ ಮೆದೆಯನ್ನು ಚೆಲ್ಲಾಪಿಲ್ಲಿ
ಹನೂರು: ತಾಲೂಕಿನ ಚಂಗಡಿ ಗ್ರಾಮದ ಜಮೀನೊಂದಕ್ಕೆ ಶನಿವಾರ ರಾತ್ರಿ ಕಾಡಾನೆಗಳು ಲಗ್ಗೆ ಇಟ್ಟು ರಾಗಿ ಹುಲ್ಲಿನ ಮೆದೆಯನ್ನು ಚೆಲ್ಲಾಪಿಲ್ಲಿಗೊಳಿಸಿವೆ.
ಗ್ರಾಮದ ಕರಿಯಪ್ಪ ಅವರು ರಾಗಿ ಕಟಾವು ಮಾಡಿ ಜಮೀನಿನಲ್ಲಿ ಮೆದೆ ಹಾಕಿದ್ದರು. ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಗಳು ಜಮೀನಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಮೆದೆಯನ್ನು ಚೆಲ್ಲಾಪಿಲ್ಲಿಗೊಳಿಸಿವೆ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಕಾಡಾನೆಗಳ ಕಡಿವಾಣಕ್ಕೆ ಅಗತ್ಯ ಕ್ರಮವಹಿಸುವಂತೆ ರೈತರು ಒತ್ತಾಯಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net