ಮತದಾರರ ಪರಿಷ್ಕರಣೆ ಅನ್ಯಾಯದ ಪರಮಾವಧಿ

ಚಾಮರಾಜನಗರದ ವರ್ತಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಈದ್ ಸೌಹಾರ್ದ ಕೂಟ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಶಿವಸುಂದರ್, ಅಕ್ಬರ್ ಆಲಿ ಉಡುಪಿ, ಯು.ಅಬ್ದುಸ್ಸಾಲಾಮ್, ಕೆ.ವೆಂಕಟರಾಜು ಇತರರು ಹಾಜರಿದ್ದರು.
ಚಾಮರಾಜನಗರದ ವರ್ತಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಈದ್ ಸೌಹಾರ್ದ ಕೂಟ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಶಿವಸುಂದರ್, ಅಕ್ಬರ್ ಆಲಿ ಉಡುಪಿ, ಯು.ಅಬ್ದುಸ್ಸಾಲಾಮ್, ಕೆ.ವೆಂಕಟರಾಜು ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಶಿವಸುಂದರ್ ಅಭಿಪ್ರಾಯ
  • ಜಮಾತೆ ಇಸ್ಲಾಮಿ ಹಿಂದ್ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗ
ಚಾಮರಾಜನಗರ: ಮತದಾರರ ಪರಿಷ್ಕರಣೆ ಎಂಬುದು ಅನ್ಯಾಯದ ಪರಮಾವಧಿ. ಚುನಾವಣೆ ಆಯೋಗಕ್ಕೆ ನಾಗರಿಕತ್ವವನ್ನು ಪ್ರಶ್ನಿಸುವ ಅಧಿಕಾರವಿಲ್ಲ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟರು.
ನಗರದ ವರ್ತಕರ ಭವನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಈದ್ ಸೌಹಾರ್ದ ಕೂಟ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕೆಲಸವನ್ನು ಸ್ವಾತಂತ್ರ್ಯ ಬಂದಾಗಿನಿಂದ ಮಾಡುತ್ತಿದೆ. ಈಗ ಮತದಾರರ ಹೆಸರು ತೆಗೆಯುವ ಕೆಲಸ ಮಾಡುತ್ತಿದೆ. ದಲಿತರು, ಆದಿವಾಸಿಗಳು, ಅಸಂಘಟಿತ ಕಾರ್ಮಿಕರು, ಎಲ್ಲ ಜಾತಿಯ ಮಹಿಳೆಯರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಷಡ್ಯಂತ್ರ ನಡೆಯುತ್ತಿದೆ ಎಂದರು.
ಮುಸ್ಲೀಮರನ್ನು ಬಾಂಗ್ಲಾ ವಲಸಿಗರು ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಎಸ್‌ಐಆರ್ ಪೂಣ್ ಪ್ರಮಾಣದಲ್ಲಿ ಜಾರಿಯಾದರೆ 12 ಕೋಟಿ ಜನ ಹೊರಗುಳಿಯುತ್ತಾರೆ. ಆದ್ದರಿಂದ ಎಚ್ಚರವಹಿಸಬೇಕಾಗಿದೆ ಎಂದರು. ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಆಲಿ ಉಡುಪಿ ಮಾತನಾಡಿ, ಮುಸ್ಲಿಮರು ಭಯೋತ್ಪಾದಕರು, ಮಸೀದಿಗಳು ಚಾಕು ಚೂರಿಗಳನ್ನು ಬಚ್ಚಿಡುವ ಜಾಗ ಎಂಬ ಅಪಪ್ರಚಾರ ತೊಡೆದು ಹಾಕಲು ಮಸೀದಿ ದರ್ಶನ ಎಂಬ ಕಾರ್ಯಕ್ರಮ ಎಲ್ಲೆಡೆ ನಡೆಸಲಾಗುತ್ತಿದೆ. ಮುಸ್ಲಿಂ ಧರ್ಮ ಆಚರಣೆ, ನಮಾಜ್, ಮಸೀದಿಗಳ ಬಗ್ಗೆ ಅಪನಂಬಿಕೆ, ಅನುಮಾನಗಳನ್ನು ಹೋಗಲಾಡಿಸುವ ಕೆಲಸವನ್ನು ಜಮಾತೆ ಹಿಂದ್ ನಡೆಸಿಕೊಂಡು ಬರುತ್ತಿದೆ ಎಂದರು.
ಜಮಾತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಯು.ಅಬ್ದುಸ್ಸಾಲಾಮ್, ಕೆ.ವೆಂಕಟರಾಜು ಅಧ್ಯಕ್ಷತೆವಹಿಸಿದ್ದರು. ಪರಿಸರ ಪ್ರೇಮಿ ಕೆ.ವೆಂಕಟರಾಜು ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಬಹುಭಾಷಾ ಕವಿಗೋಷ್ಠಿ ನಡೆಯಿತು. ಶಿವಸುಂದರ್ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಮದೀನ ಮಸೀದಿಯ ಅಧ್ಯಕ್ಷ ನಹೀಮ್ ಉಲ್ಲ ಹಕ್, ಕಾರ್ಯದರ್ಶಿ ವಸೀಂ ಪಾಷಾ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್, ಡಾ.ಪಿ.ವೀರಭದ್ರನಾಯಕ ,ವಕೀಲ ಕೆ.ಎಂ.ಶ್ರೀನಿವಾಸಮೂರ್ತಿ, ಹಿರಿಯ ಪತ್ರಕರ್ತ ಎ.ಡಿ.ಸಿಲ್ವಾ ಮತ್ತು ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net