ವಿಕಸಿತ ಭಾರತದ ಸವಾಲುಗಳು ಹಾಗೂ ಪ್ರಾದೇಶಿಕ ಅಭಿವೃದ್ಧಿ ವಿಷಯಗಳ ಕುರಿತ ತಂತ್ರಜ್ಞಾನ, ನಾವೀನ್ಯತೆ ಮತ್ತು ಭವಿಷ್ಯದ ಸನ್ನದ್ಧತೆ ಬಗ್ಗೆ ರಸಪ್ರಶ್ನೆ ಹಾಗೂ ಪ್ರಬಂಧಸ್ಫರ್ಧೆ, ಸಾಂಸ್ಕøತಿಕ ವಿಭಾಗದಲ್ಲಿ ಜಾನಪದ ಗೀತೆ, ನೃತ್ಯ, ಚಿತ್ರಕಲೆ, ವಾಗ್ಮೀತಾ ಸ್ಪರ್ಧೆ, ಕವನ ರಚನೆ, ರಾಷ್ಟ್ರೀಯ ಯುವ ವಿನ್ಯಾಸ, ಯುವ ಉದ್ಯಮಿಗಳಿಗೆ ಎದುರಾಗುವ ಸವಾಲು, ಯುವ ಸಂಸತ್ತು ಸೇರಿದಂತೆ ಆರು ಬಗೆಯ ಸ್ಪರ್ಧೆಗಳಲ್ಲಿ ಯುವಜನರು ಭಾಗವಹಿಸಬಹುದಾಗಿದೆ. ಕಳೆದ ಬಾರಿ ನಡೆದ ವಿಕಸಿತ ಭಾರತ ಯುವ ನಾಯಕ ಸಂವಾದದಲ್ಲಿ ದೇಶಾದ್ಯಂತ 50 ಲಕ್ಷಕ್ಕೂ ಹೆಚ್ಚಿನ ಯುವಜನರು ರಸಪ್ರಶ್ನೆಯಲ್ಲಿ ಭಾಗವಹಿಸಿ ಅರ್ಹತಾ ಆಧಾರಿತ ಪ್ರಕ್ರಿಯೆಯ ಮೂಲಕ 3 ಸಾವಿರ ಮಂದಿ ಯುವಜನರು ರಾಷ್ಟ್ರೀಯ ಸಂವಾದಕ್ಕೆ ಆಯ್ಕೆಯಾಗಿದ್ದರು. ಅಭಿಯಾನವು ಇದನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.