ಚಿಕ್ಕಲ್ಲೂರು ಜಾತ್ರೆ ಸುಸೂತ್ರಕ್ಕೆ ವಿವಿಧ ಆದೇಶ

ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಕಳೆದ ವರ್ಷ ನಡೆದಿದ್ದ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರು
ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಕಳೆದ ವರ್ಷ ನಡೆದಿದ್ದ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರು
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕಲ್ಲೂರು ಕ್ಷೇತ್ರದಲ್ಲಿ ಜ.3ರಿಂದ 8ರವರಗೆ ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ
  • ಸೆಕ್ಟರ್ ಆಫೀಸರ್‌ಗಳ ನೇಮಕ
  • ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಏಕಮುಖ ಮಾರ್ಗ
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಜ.3ರಿಂದ 8ರವರಗೆ ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿವಿಧ ಆದೇಶಗಳನ್ನು ಹೊರಡಿಸಿದೆ.
ಚಿಕ್ಕಲ್ಲೂರಿನ ವಿವಿಧ ವ್ಯಾಪ್ತಿಯ ಪ್ರದೇಶಗಳಿಗೆ ಕೊಳ್ಳೇಗಾಲದ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ ಹಾಗೂ ತಹಸೀಲ್ದಾರ್ ಬಸವರಾಜು ಮತ್ತು ಇನ್ನಿತರ ಅಧಿಕಾರಿಗಳನ್ನು ಹೆಚ್ಚುವರಿ ಸೆಕ್ಟರ್ ಆಫೀಸರ್‌ಗಳನ್ನಾಗಿ ನೇಮಕ ಮಾಡಿ ನಿಗದಿತ ಸ್ಥಳಗಳಲ್ಲಿ, ವಿವಿಧ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ.
ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜ.3 ರಿಂದ 8ರ ವರೆಗೆ ಏಕಮುಖ ಮಾರ್ಗದಲ್ಲಿ ಮಾತ್ರ ವಾಹನಗಳು ಸಂಚರಿಸಬೇಕಿದೆ. ಮಾರ್ಗ 1ರಲ್ಲಿ ಚಿಕ್ಕಲ್ಲೂರು ಗ್ರಾಮಕ್ಕೆ ಒಳ ಬರಲು ಕೊತ್ತನೂರು ಗ್ರಾಮ- ಬಾಣೂರು ಕ್ರಾಸ್ ಬಾಣೂರು-ಸುಂಡ್ರಳ್ಳಿ ಹಾಗೂ ಮಾರ್ಗ-2ರಲ್ಲಿ ಚಿಕ್ಕಲ್ಲೂರು ಗ್ರಾಮದಿಂದ ಹೊರ ಹೋಗಲು ಚಿಕ್ಕಲ್ಲೂರು-ಬಾಣೂರು ಕ್ರಾಸ್-ಕೊತ್ತನೂರು ಮಾರ್ಗದಲ್ಲಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಟ್ಯಾಟು, ಹಚ್ಚೆ ನಿಷೇಧ:
ದೇವಸ್ಥಾನದ ಆವರಣದಲ್ಲಿ ಅಥವಾ ಗ್ರಾಮದ ವ್ಯಾಪ್ತಿಯಲ್ಲಿ ಹಾಗೂ ದೇವಸ್ಥಾನದ ಸುತ್ತಾಮುತ್ತ ಭಕ್ತಾಧಿಗಳು, ಸಾರ್ವಜನಿಕರಿಗೆ ಟ್ಯಾಟು, ಹಚ್ಚೆ ಹಾಕುವುದನ್ನು ನಿಷೇಧಿಸಿ ನಿರ್ಗಮಿತ ಡಿಸಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net