ಹಂಗಳ, ದೇವರಹಳ್ಳಿಯಲ್ಲಿ ಯುಗಾದಿ ಆಚರಣೆ

ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಯುಗಾದಿ ಅಂಗವಾಗಿ 13 ಜೋಡಿ ಎತ್ತುಗಳಿಗೆ ಹೊನ್ನೇರುಕಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಯುಗಾದಿ ಅಂಗವಾಗಿ 13 ಜೋಡಿ ಎತ್ತುಗಳಿಗೆ ಹೊನ್ನೇರುಕಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಹಂಗಳ ಗ್ರಾಮದ ಮಾರಮ್ಮನ ದೇವಾಲಯದ ಬಳಿ 13 ಜೋಡಿ ಅಲಂಕೃತ ಹೊನ್ನೇರುಗಳಿಗೆ ಪೂಜೆ
ಗುಂಡ್ಲುಪೇಟೆ: ತಾಲೂಕಿನ ಹಂಗಳ ಹಾಗೂ ದೇವರಹಳ್ಳಿ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಅಂಗವಾಗಿ ಹೊನ್ನೇರು ಮತ್ತು ಎತ್ತಿನ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಪ್ರತಿ ವರ್ಷವೂ ವಿಜೃಂಭಣೆಯಿಂದ ಆಚರಿಸುವ ಹಬ್ಬಕ್ಕೆ ಎರಡೂ ಗ್ರಾಮಗಳಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗಿತ್ತು. ಎಲ್ಲ ದೇವಾಲಯಗಳನ್ನು ಶುಚಿಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕರಿಸುವ ಜತೆಗೆ ರಸ್ತೆ ಬದಿಗಳಲ್ಲಿ ಕಣ್ಣು ಕೋರೈಸುವಂತೆ ವಿದ್ಯುತ್ ದೀಪಾಲಂಕಾರ ಮಾಡಿದ್ದರು.
ಹಂಗಳ ಗ್ರಾಮದ ಮಾರಮ್ಮನ ದೇವಾಲಯದ ಬಳಿ 13 ಜೋಡಿ ಅಲಂಕೃತ ಹೊನ್ನೇರುಗಳಿಗೆ ಪೂಜೆ ಸಲ್ಲಿಸಿ ಬಸವನಗುಡಿವರೆಗೆ ಮೆರವಣಿಗೆ ಮಾಡಲಾಯಿತು.
ದೇವರಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹೊನ್ನೇರು ಕಟ್ಟುವ ಮೂಲಕ ಗ್ರಾಮದ ಪ್ರವೇಶ ದ್ವಾರದ ಅಂಕ ಪ್ರದಕ್ಷಿಣೆ ಹಾಕಿಸಲಾಯಿತು. ಮಧ್ಯಾಹ್ನ ಗ್ರಾಮದೇವರಾದ ಮಲ್ಲೇಶ್ವರ ಸ್ವಾಮಿಗೆ ಹರಕೆ ಹೊತ್ತ ರೈತರು, ರಾಸುಗಳನ್ನು ಹೂವುಗಳಿಂದ ಅಲಂಕರಿಸಿ ಅವುಗಳ ಕುತ್ತಿಗೆಗೆ ಹಗ್ಗಕಟ್ಟಿ ದೇವರ ಓರುಗಂಭದಿಂದ 100 ಮೀಟರಿನಷ್ಟು ದೂರ ಓಡಿಸುವುದರಿಂದ ದನಕರುಗಳಿಗೆ ಯಾವುದೇ ರೀತಿಯಾದ ಸೋಂಕು ತಗಲುವುದಿಲ್ಲ ಎಂಬ ನಂಬಿಕೆ ಚಾಲ್ತಿಯಲಿದೆ. ಎತ್ತಿನ ಹಬ್ಬ ಮುಗಿದ ಬಳಿಕ ಸಂಜೆ ವೇಳೆ ಗ್ರಾಮದ ದೇವರನ್ನ ವಿವಿಧ ಹೂವುಗಳಿಂದ ಅಲಂಕೃತಗೊಳಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net