

ಪ್ರಮುಖ ಮುಖ್ಯಾಂಶಗಳು
ಕೊಳ್ಳೇಗಾಲ:
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟಲು ರಾಜ್ಯಾದ್ಯಂತ ಸಂಘಟನ್ ಸೃಜನ್ ಅಭಿಯಾನ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕ ಶಬರಿನಾಥನ್ ಹೇಳಿದರು.
ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಕೊಳ್ಳೇಗಾಲ ಕ್ಷೇತ್ರದಿಂದ ಚಂದ್ರು, ಯೋಗೀಶ್, ತಿಮ್ಮರಾಜೀಪುರ ರಾಜು, ಚೇತನ್ ದೊರೈರಾಜ್, ಮಾಂಬಳ್ಳಿ ನಂಜುಂಡಸ್ವಾಮಿ, ಬಿ.ತೋಟೇಶ್, ಕೇತಮ್ಮ, ಡಿ.ಎನ್.ನಟರಾಜು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಬಳಿಕ ವೀಕ್ಷಕ ಶಬರಿನಾಥನ್ ಅವರ ಬಳಿ ತಂಡೋಪ ತಂಡವಾಗಿ ಕಾರ್ಯಕರ್ತರು ತೆರಳಿ ಜಿಲ್ಲಾಧ್ಯಕ್ಷರ ಆಯ್ಕೆಯ ಬಗ್ಗೆ ಅಭಿಪ್ರಾಯ ತಿಳಿಸಿದರು.