ಕುಮಾರ ಎಲೆಕ್ಟ್ರಿಕಲ್ ರಸ್ತೆಯಲ್ಲಿ ಸಂಚಾರ ಕಷ್ಟಕಷ್ಟ

ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆಯಲ್ಲಿ ವ್ಯಾಪಾರಿಗಳು ರಸ್ತೆ ಜಾಅಗದಲ್ಲಿ ಅಂಗಡಿ-ಮುಂಗಟ್ಟನ್ನು ವಿಸ್ತರಿಸಿ ವ್ಯಾಪಾರಕ್ಕೆ ಇಳಿದು ತೊಂದರೆಯಾಗಿರುವುದು
ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆಯಲ್ಲಿ ವ್ಯಾಪಾರಿಗಳು ರಸ್ತೆ ಜಾಅಗದಲ್ಲಿ ಅಂಗಡಿ-ಮುಂಗಟ್ಟನ್ನು ವಿಸ್ತರಿಸಿ ವ್ಯಾಪಾರಕ್ಕೆ ಇಳಿದು ತೊಂದರೆಯಾಗಿರುವುದು
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆಯನ್ನೂ ಆಕ್ರಮಿಸಿಕೊಂಡು ವ್ಯಾಪಾರ ವಹಿವಾಟು
ಕೊಳ್ಳೇಗಾಲ : ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆಯಲ್ಲಿ ವ್ಯಾಪಾರಿಗಳು ರಸ್ತೆ ಜಾಗಕ್ಕೆ ಅಂಗಡಿ-ಮುಂಗಟ್ಟನ್ನು ವಿಸ್ತರಿಸಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಿಂದ ಚಿನ್ನದ ಅಂಗಡಿ ಬೀದಿಗೆ ಸಂಪರ್ಕ ಬೆಸೆಯುವ ರಸ್ತೆಯಲ್ಲಿ ತೆರೆದಿರುವ ಬಟ್ಟೆ ಅಂಗಡಿಗಳು, ಹೂವಿನ ಅಂಗಡಿ, ಪೂಜಾ ಸಾಮಗ್ರಿಗಳ ಅಂಗಡಿಗಳು ರಸ್ತೆ ಜಾಗವನ್ನೇ ಆವರಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿವೆ. ಇದರಿಂದಾಗಿ ವಾಹನ ದಟ್ಟಣೆ, ಜನ ದಟ್ಟಣೆ ಹೆಚ್ಚಾಗುತ್ತಿದೆ.  ಹಬ್ಬದ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಿದೆ. ಇನ್ನೂ ವ್ಯಾಪಾರ ವಹಿವಾಟಿಗೆ ಬರುವ ಜನರು ತಮ್ಮ ಬೈಕ್, ಕಾರುಗಳನ್ನು ರಸ್ತೆ ಅರ್ಧಕ್ಕೆ ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ಬಹಳ ತೊಂದರೆಯಾಗಿದೆ.
ರಸ್ತೆಗೆ ಅಂಗಡಿ-ಮುಂಗಟ್ಟು ವ್ಯಾಪಾರ ವಹಿವಾಟನ್ನು ವಿಸ್ತರಣೆ ಮಾಡಿರುವುದರಿಂದ ತೊಂದರೆ ಆಗುತ್ತದೆ. ಅಲ್ಲದೆ, ತಳ್ಳುವ ಗಾಡಿಗಳ ವ್ಯಾಪಾರಿಗಳು ನಿಲ್ಲುವುದರಿಂದ ರಸ್ತೆ ಮಾರ್ಗದ ಸಂಚಾರ ಕಷ್ಟವಾಗಿದೆ. ಈ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ನಗರಸಭೆ ಅಧಿಕಾರಿಗಳು ರಸ್ತೆ ಜಾಗದಲ್ಲಿ ಅಂಗಡಿ-ಮುಂಗಟ್ಟು ವಿಸ್ತರಿಸಿ ವ್ಯಾಪಾರಕ್ಕಿಳಿದವರ ಮೇಲೆ ಕ್ರಮವಹಿಸಿಲ್ಲ. ಜನರು ಸಮಸ್ಯೆ ಕಂಡರೂ ಕಾಣದ ರೀತಿ ಇರುವುದರಿಂದ ಸಾರ್ವಜನಿಕರು ಅಕ್ರೋಶ ಹೊರಹಾಕುತ್ತಿದ್ದಾರೆ.
ಒತ್ತುವರಿ ತೆರವು ಮಾಡಿ
ಕುಮಾರ ಎಲೆಕ್ಟ್ರಿಕಲ್ ರಸ್ತೆಯಲ್ಲಿ ಪೂಜಾ ಸಾಮಗ್ರಿ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಡಿಗಳು ತಮ್ಮ ವ್ಯಾಪಾರವನ್ನು ರಸ್ತೆ ವಿಸ್ತರಿಸಿದ್ದಾರೆ. ಅಂಗಡಿಗಳ ಮಾಲೀಕರು ರಸ್ತೆಗಳನ್ನು ಒತ್ತುವರಿ ಮಾಡಿಕೊಡಿದ್ದಾರೆ. ಪರಿಣಾಮ ಸಂಚಾರಕ್ಕೆ ತೊಂದರೆಯಾಗಿದೆ. ಒತ್ತುವರಿಯಾಗಿರುವ ರಸ್ತೆ ಜಾಗವನ್ನು ಕೂಡಲೇ ತೆರವು ಮಾಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ತಾಲೂಕು ಪದಾಧಿಕಾರಿಗಳು ಇತ್ತೀಚೆಗೆ ನಗರಸಭೆಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. 

ಕುಮಾರ ಎಲೆಕ್ಟ್ರಿಕಲ್ ರಸ್ತೆ ಜಾಗವನ್ನು ಅಳತೆ ಮಾಡಿಸಲಾಗುತ್ತದೆ. ನಂತರ ರಸೆ ಒತ್ತುವರಿ ಮಾಡಿ ವ್ಯಾಪಾರ-ವಹಿವಾಟು ಮಾಡು ತ್ತಿರುವವರಿಗೆ ಸೂಚನೆ ನೀಡಿ ಕ್ರಮ ವಹಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net