ಜನರನ್ನು ಒಕ್ಕಲೆಬ್ಬಿಸುವ ಸಲುವಾಗಿ ಟೈಗರ್ ಪ್ರಾಜೆಕ್ಟ್

ಹನೂರಿನ ಅಸ್ತೂರು ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು. ಮಹಾಂತ ಸ್ವಾಮೀಜಿ, ಹೊನ್ನೂರು ಪ್ರಕಾಶ್, ಕರಿಯಪ್ಪ, ಮಹೇಶ್, ಪೊನ್ನಾಚಿ ರಾಜು ಇತರರಿದ್ದರು.
ಹನೂರಿನ ಅಸ್ತೂರು ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು. ಮಹಾಂತ ಸ್ವಾಮೀಜಿ, ಹೊನ್ನೂರು ಪ್ರಕಾಶ್, ಕರಿಯಪ್ಪ, ಮಹೇಶ್, ಪೊನ್ನಾಚಿ ರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Tiger Project
ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿಸುವ ಸಲುವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳನ್ನು ಈ ಪ್ರದೇಶಕ್ಕೆ ತಂದು ಬಿಡುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆರೋಪಿಸಿದರು.
ತಾಲೂಕಿನ ಕಾಡಂಚಿನ ಗ್ರಾಮ ಪೊನ್ನಾಚಿ ಹಾಗೂ ಅಸ್ತೂರು ಗ್ರಾಮದಲ್ಲಿ ಬುಧವಾರ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕಾಡಂಚಿನಲ್ಲಿ ಜನತೆ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುತ್ತಿದ್ದಾರೆ. ಆದರೆ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಸಲುವಾಗಿ ಅರಣ್ಯ ಇಲಾಖೆ ಈ ಪ್ರದೇಶವನ್ನು ಟೈಗರ್ ಪ್ರಾಜೆಕ್ಟ್‌ಗೆ ಒಳಪಡಿಸಲು ಮುಂದಾಗುತ್ತಿದೆ. ಈ ಕಾರಣದಿಂದ ಹುಲಿ, ಚಿರತೆ ಹಾಗೂ ಇನ್ನಿತರ ಕಾಡು ಪ್ರಾಣಿಗಳನ್ನು ಈ ಪ್ರದೇಶಕ್ಕೆ ತಂದು ಬಿಡಲಾಗುತ್ತಿದ್ದು, ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಹೆದರುವುದಿಲ್ಲ. ಜತೆಗೆ ಈ ಭಾಗದಲ್ಲಿ ಸಫಾರಿ ಹಾಗೂ ರೆಸಾರ್ಟ್ ಆರಂಭದಿಂದ ಕಾಡಂಚಿನ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ರೆಸಾರ್ಟ್ ಹಾಗೂ ಸಫಾರಿಯನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಸಂಘಟಿತರಾಗುವುದು ಅಗತ್ಯವೂ ಅನಿವಾರ್ಯವೂ ಆಗಿದೆ. ಈ ದೆಸೆಯಲ್ಲಿ ಗ್ರಾಮ ಘಟಕವನ್ನು ಉದ್ಘಾಟಿಸಿರುವುದು ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.
ಶ್ರೀ ಮಹಾಂತ ಸ್ವಾಮೀಜಿ, ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಶಶಿ, ಮಹೇಶ್, ಶಾಂತಕುಮಾರ್, ಮಾದಪ್ಪ, ವಿನೇಶ್, ಶಿವರುದ್ರಸ್ವಾಮಿ, ಮಾದೇವ, ಪ್ರಕಾಶ್, ಶ್ರೀನಿವಾಸ್, ಪೊನ್ನಾಚಿ ರಾಜು ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net